• Home
  • >
  • Blog
  • >
  • Personal Loan
  • >
  • ರೂ. 50,000 ಗಳ ವೈಯಕ್ತಿಕ ಸಾಲಕ್ಕಾಗಿ ಪ್ಯಾನ್ ಕಾರ್ಡ್ ಕಡ್ಡಾಯವೇ

ರೂ. 50,000 ಗಳ ವೈಯಕ್ತಿಕ ಸಾಲಕ್ಕಾಗಿ ಪ್ಯಾನ್ ಕಾರ್ಡ್ ಕಡ್ಡಾಯವೇ

ಸಾಲ ಅನುಮೋದನೆಗಾಗಿ ಹಣಕಾಸು ಕಂಪೆನಿಗಳು ಮತ್ತು ಸಾಲದಾತರಿಗೆ ಅಗತ್ಯವಿರುವ ಪ್ರಮುಖ ಗುರುತಿನ ಚೀಟಿಗಳ ಪೈಕಿ ಪ್ಯಾನ್ ಕಾರ್ಡ್ ಕೂಡಾ ಒಂದು. ಸಾಲಗಾರನ ಹಣಕಾಸು ಇತಿಹಾಸವನ್ನು ಪ್ಯಾನ್ ಕಾರ್ಡ್ ಪ್ರತಿಬಿಂಬಿಸುತ್ತದೆ ಮತ್ತು ಅವರ ಮರುಪಾವತಿ ಸಾಮರ್ಥ್ಯದ ಬಗ್ಗೆ ಸಾಲದಾತರಿಗೆ ಕಲ್ಪನೆ ನೀಡುತ್ತದೆ. ರೂ. 50,000 ಅಥವಾ ಅಧಿಕ ವೈಯಕ್ತಿಕ ಸಾಲದ ವಿಷಯಕ್ಕೆ ಬಂದಾಗ, ಸಲ್ಲಿಸಬೇಕಾಗುವ ಕಡ್ಡಾಯ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡಾ ಒಂದು.

ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಲು ಅಧಿಕೃತ ಸಿಐಬಿಐಲ್ ಜಾಲತಾಣಕ್ಕೆ ಭೇಟಿ ನೀಡಿ. ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ ಮತ್ತು ಸಿಐಬಿಐಎಲ್ ಸ್ಕೋರ್ ಗಾಗಿ ನಿಮ್ಮ ಮನವಿಯನ್ನು ಸಲ್ಲಿಸಿ. ಸುಮಾರು 700 ರಿಂದ 750 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರಿಂಗ್, ಸಾಲಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್ ಅರ್ಹತೆಯನ್ನು ಖಚಿತಪಡಿಸುತ್ತದೆ. ಪ್ಯಾನ್ ಕಾರ್ಡ್ ನ ಅನುಪಸ್ಥಿತಿಯಲ್ಲಿ, ಅರ್ಜಿದಾರರು ವೈಯಕ್ತಿಕ ವಿವರಗಳೊಂದಿಗೆ ಇತರ ಕೆವೈಸಿ ದಾಖಲೆಗಳನ್ನು ಕೂಡಾ ಸಲ್ಲಿಸಬೇಕು.

ನೀವು ಸಾಲದಾತರೊಂದಿಗೆ ವರ್ಷಗಳ ನಿಷ್ಠಾವಂತ ಬಾಂಧವ್ಯ ಹೊಂದಿರುವಿರಾದರೆ, ಯಾವುದೇ ದಾಖಲೆಗಳ ಅಗತ್ಯವಿಲ್ಲದಂತೆಯೇ ಪೂರ್ವ-ಅನುಮೋದಿತ ಸಾಲಗಳ ಪ್ರಯೋಜನವನ್ನು ಸಾಲಗಾರರು ಪಡೆದುಕೊಳ್ಳಬಹುದು. ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಿಸಲಾದ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿಶಿಷ್ಠ ಸಂಖ್ಯೆ ಸೇರಿದಂತೆ ಕೆವೈಸಿ ವಿವರಗಳ ಪರಿಶೀಲನೆಯೊಂದಿಗೆ ಸಣ್ಣ ಸಾಲಗಳು ಅನುಮೋದನೆ ಪಡೆದುಕೊಳ್ಳಬಹುದು.

ರೂ. 50,000 ಯಿಂದ ರೂ. 1,50,000 ವರೆಗಿನ ತ್ವರಿತ ವೈಯಕ್ತಿಕ ಸಾಲ ಪಡೆದುಕೊಳ್ಳಲು ಹೀರೋಫಿನ್‌ಕಾರ್ಪ್ ನಲ್ಲಿ ಇನ್ಸ್ ಟೆಂಟ್ ಲೋನ್ ಆಪ್ ಪ್ರಯತ್ನಿಸಿ ನೋಡಿ. ಇದು ಭಾರತದಲ್ಲಿ ಒಂದು ವಿಶ್ವಾಸಾರ್ಹ ಕಂಪೆನಿಯಾದ ಹೀರೋ ಫಿನ್ ಕಾರ್ಪ್ ಮೂಲಕ ಆರಂಭಿಸಲಾಗಿರುವ ಒಂದು ವಿಶ್ವಾಸಾರ್ಹ ಆನ್ಲೈನ್ ಸಾಲ ವೇದಿಕೆಯಾಗಿದೆ. ರೂ. 50,000 ಮತ್ತು ಅಧಿಕ ವೈಯಕ್ತಿಕ ಸಾಲ ಪಡೆದುಕೊಳ್ಳಲು ನಿಗದಿ ಪಡಿಸಲಾಗಿರುವ ಅರ್ಹತಾ ಮಾನದಂಡವನ್ನು ನಾವು ನೋಡೋಣ:

ವೈಯಕ್ತಿಕ ಸಾಲ ಅರ್ಹತೆಯ ವಿಷಯಕ್ಕೆ ಬಂದಾಗ ಸಾಲಗಾರನ ಮಾಸಿಕ ಆದಾಯ ಮುಖ್ಯವೆನಿಸುತ್ತದೆ. ವೈಯಕ್ತಿಕ ಸಾಲಗಳಿಗಾಗಿ ವಿಭಿನ್ನ ಸಾಲದಾತರು ವಿಭಿನ್ನ ಮಾನದಂಡ ಹೊಂದಿರುತ್ತಾರೆ.
To Avail Personal Loan
Apply Now

ರೂ. 50,000 ವರೆಗಿನ ವೈಯಕ್ತಿಕ ಸಾಲ ಅರ್ಜಿಗಾಗಿ ಕೆಳಗಿನ ಅರ್ಹತಾ ಮಾನದಂಡ ತುಂಬಿ

 
  • ಭಾರತೀಯ ಪೌರತ್ವದ ಪುರಾವೆ
  • ಆದಾಯ ಪುರಾವೆಗಳ ರೂಪದಲ್ಲಿ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ವೇತನ ಸ್ಲಿಪ್
  • ಅರ್ಜಿದಾರನ ವಯಸ್ಸಿನ ಅರ್ಹತಾ ಮಾನದಂಡವು 21-58 ವರ್ಷಗಳ ಶ್ರೇಣಿಯಲ್ಲಿರಬೇಕು
  • ನೀವು ಮಾಸಿಕ ಕನಿಷ್ಠ ರೂ. 15,000 ವೇತನ ಗಳಿಸುವ ವೇತನ ಸಹಿತ ಅಥವಾ ಸ್ವ-ಉದ್ಯೋಗಿ ಆಗಿರಬೇಕು
  • ನೀವು ಖಾಸಗಿ ಅಥವಾ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಲ್ಲಿ /ಅದರೊಂದಿಗೆ ಕೆಲಸ ಮಾಡುತ್ತಿರಬೇಕು
  • ಸಾಲದಾತರಿಂದ ನಿಗದಿ ಪಡಿಸಲ್ಪಟ್ಟಿರುವ ಮಾನದಂಡವನ್ನು ನಿಮ್ಮ ಕ್ರೆಡಿಟ್ ಇತಿಹಾಸ ಪೂರೈಸಬೇಕು. ವಿಭಿನ್ನ ಸಾಲದಾತರು ತಮ್ಮ ಪ್ರಮಾಣಗಳಿಗೆ ಅನುಗುಣವಾಗಿ ಮಾನದಂಡ ನಿಗದಿಪಡಿಸುತ್ತಾರಾದ್ದರಿಂದ ಕ್ರೆಡಿಟ್ ಸ್ಕೋರ್ ಭಿನ್ನವಾಗಿರಬಹುದು. 
 

ರೂ. 50,000 ಅಥವಾ ಅಧಿಕ ವೈಯಕ್ತಿಕ ಸಾಲಕ್ಕಾಗಿ ಅರ್ಹತಾ ಮಾನದಂಡದೊಂದಿಗೆ ಅಗತ್ಯವಿರುವ ಕಡ್ಡಾಯ ದಾಖಲೆಗಳ ಸೆಟ್ ಗಳಿವೆ

 
  • ಪ್ರಮಾಣಿತ ಕೆವೈಸಿ ದಾಖಲೆಗಳು – ಆಧಾರ್ ಕಾರ್ಡ್ /ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ /ಪ್ಯಾನ್ ಕಾರ್ಡ್
 
  • ಆದಾಯ ದಾಖಲೆಗಳು – ವೇತನಸಹಿತ ವ್ಯಕ್ತಿಗಳಿಗೆ ಇತ್ತೀಚಿನ ವೇತನ ಸ್ಲಿಪ್ ಗಳು ಮತ್ತು ಸ್ವ-ಉದ್ಯೋಗಿಗಳಿಗೆ ಬ್ಯಾಂಕ್ ಸ್ಟೇಟ್ಮೆಂಟ್
 

ರೂ. 50,000 ವೈಯಕ್ತಿಕ ಸಾಲ ಪಡೆಯುವುದನ್ನು ಹೊರತು ಪಡಿಸಿ, ಈ ಕೆಳಗಿನ ಪರಿಸ್ಥಿತಿಗಳಲ್ಲಿ ಕೂಡಾ ಪ್ಯಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ

 
  • ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದಕ್ಕೆ
  • ಹೊಸ ಬ್ಯಾಂಕ್ ಖಾತೆ/ಡಿಮ್ಯಾಟ್ ಖಾತೆ ತೆರೆಯುವುದಕ್ಕೆ
  • ನಗದು ಡಿಪಾಸಿಟ್ ಅಥವಾ ರೂ. 50,000 ಕ್ಕಿಂತ ಅಧಿಕ ಮೊತ್ತದ ನಗದು ಪಾವತಿಸುವುದಕ್ಕೆ
  • ಮ್ಯೂಚುವಲ್ ಫಂಡ್ಸ್, ಬಾಂಡ್ಸ್ ಇತ್ಯಾದಿ ಖರೀದಿಯಲ್ಲಿ ತೊಡಗುವುದಕ್ಕೆ
  • ರೂ. 50,000 ಅಥವಾ ಅದಕ್ಕಿಂತ ಅಧಿಕ ಹಣ ಫಿಕ್ಸೆಡ್ ಡಿಪಾಸಿಟ್ ಮಾಡುವುದಕ್ಕೆ
  • ರೂ. 50,000 ಅಥವಾ ಅದಕ್ಕಿಂತ ಅಧಿಕ ವಿಮೆ ಪ್ರೀಮಿಯಂ ಪಾವತಿಸುವುದಕ್ಕೆ

ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಅಸ್ಥಿರ ಹಣಕಾಸು ಸ್ಥಿತಿಯನ್ನು ಪ್ರತಿಬಿಂಬಿಸಿದರೆ, ಭದ್ರತೆ ಕಾರಣಗಳಿಗಾಗಿ ಮತ್ತು ಡಿಫಾಲ್ಟರ್ ಗಳನ್ನು ತಪ್ಪಿಸುವ ಸಲುವಾಗಿ ವೈಯಕ್ತಿಕ ಸಾಲ ಸಾಲದಾತರು ನಿಮ್ಮ ಸಾಲಕ್ಕೆ ಪ್ರತಿಯಾಗಿ ಮೇಲಾಧಾರಕ್ಕಾಗಿ ಕೇಳಬಹುದು. ತಮ್ಮ ಪ್ಯಾನ್ ಕಾರ್ಡ್ ಅನ್ನು ಪತ್ತೆ ಮಾಡಲಾಗದ ಸಾಲದಾರರು ಮತ್ತು 50,000 ರೂಪಾಯಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು ಕೂಡಾ ತಮ್ಮ ಆಧಾರ್ ಕಾರ್ಡ್ ಉಪಯೋಗಿಸಬಹುದು.

To Avail Personal Loan
Apply Now