• Home
  • >
  • Blog
  • >
  • Personal Loan
  • >
  • ಒಂದುವೇಳೆ ಸಾಲ ಪಡೆದಿರುವ ವ್ಯಕ್ತಿ ಮೃತಪಟ್ಟರೆ ಏನಾಗುತ್ತದೆ

ಒಂದುವೇಳೆ ಸಾಲ ಪಡೆದಿರುವ ವ್ಯಕ್ತಿ ಮೃತಪಟ್ಟರೆ ಏನಾಗುತ್ತದೆ

ಜೀವನ ಯಾವಾಗಲೂ ಅನಿರೀಕ್ಷಿತವಾಗಿರುವುದರಿಂದ ಅನೇಕರು ತಮ್ಮ ಹಣಕಾಸು ವ್ಯವಹಾರವನ್ನು ಬಹಳ ಮುಂಚಿತವಾಗಿಯೇ ಯೋಜಿಸುತ್ತಾರೆ. ಅಪಘಾತ, ಗಾಯ ಅಥವಾ ಸಾಲಪಡೆದ ವ್ಯಕ್ತಿಯ ಸಾವು ಇಂತಹ ಅನಿರೀಕ್ಷಿತ ಮತ್ತು ದುರದೃಷ್ಟಕರ ಪರಿಸ್ಥಿತಿಗಳು ಕುಟುಂಬಕ್ಕೆ ಭಾರೀ ನಷ್ಟ ಉಂಟುಮಾಡಬಹುದು. ಆದರೆ ಸಾಲಪಡೆದ ವ್ಯಕ್ತಿ ಮೃತಪಟ್ಟರೆ ಸಾಲ ಏನಾಗುತ್ತದೆ. ಮರುಪಾವತಿಯ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಸಾಲ ಪಡೆದಿರುವ ವ್ಯಕ್ತಿಯ ಜೀವಂತವಾಗಿಲ್ಲದಿರುವಾಗ ತಮ್ಮ ಇಎಂಐಗಳ ಹಿಂಪಾವತಿ ಪಡೆದುಕೊಳ್ಳುವುದಕ್ಕಾಗಿ ಹಣಕಾಸು ಸಂಸ್ಥೆಗಳು ಏನು ಮಾಡುತ್ತವೆ? ವೈಯಕ್ತಿಕ ಸಾಲ ಪಡೆದುಕೊಳ್ಳುವಾಗ ಈ ಎಲ್ಲಾ ಪ್ರಶ್ನೆಗಳು ತಲೆ ಎತ್ತುತ್ತವೆ ಆದರೆ ಸಾಲಪಡೆದ ವ್ಯಕ್ತಿ ಜೀವಂತವಿಲ್ಲದಿರುವಾಗ ಮರುಪಾವತಿ ಕಷ್ಟವಾಗುತ್ತದೆ.

ವಿಭಿನ್ನ ಹಣಕಾಸು ಕಂಪೆನಿಗಳು, ಸಾಲದ ಅವಧಿಯಲ್ಲಿ ಸಾಲಪಡೆದ ವ್ಯಕ್ತಿ ಮೃತಪಟ್ಟಲ್ಲಿ ಏನು ಮಾಡಬೇಕು ಎನ್ನುವ ಕುರಿತು ತಮ್ಮದೇ ಆದ ಷರತ್ತುಗಳನ್ನು ಹೊಂದಿದ್ದು, ಅವುಗಳನ್ನು ವೈಯಕ್ತಿಕ ಸಾಲ ದಾಖಲೆಯಲ್ಲಿ ವಿವರಿಸುತ್ತದೆ. ಸಾಧಾರಣವಾಗಿ, ಅಂತಹ ಪ್ರಕರಣಗಳಲ್ಲಿ, ಬಾಕಿ ಇರುವ ಸಾಲದ ಮೊತ್ತವನ್ನು ಕುಟುಂಬದ ಕಾನೂನುಬದ್ಧ ವಾರಸುದಾರ ಪಾವತಿಸಬೇಕಾಗುತ್ತದೆ. ಒಂದು ವೇಳೆ ಮೃತಪಟ್ಟ ಸಾಲಗಾರ ತನ್ನ ಅಂದರೆ ಆತನಆಕೆಯ ಹೆಸರಿನಲ್ಲಿ ಜೀವ ವಿಮೆ ಹೊಂದಿದ್ದಲ್ಲಿ, ಆಗ ವಿಮೆ ಕಂಪೆನಿಯು ವೈಯಕ್ತಿಕ ಸಾಲವನ್ನು ಪಾವತಿ ಮಾಡುತ್ತದೆ ಮತ್ತು ಸಾಲ ಪಡೆದ ವ್ಯಕ್ತಿಯ ಯಾವುದೇ ಕುಟುಂಬದ ಸದಸ್ಯನ ಮೇಲೆ ಹೊರೆ ಬೀಳುವುದಿಲ್ಲ.
 

ಸಾಲಪಡೆದ ವ್ಯಕ್ತಿ ಮೃತಪಟ್ಟ ನಂತರ, ಸಾಲದಾತರು ವೈಯಕ್ತಿಕ ಸಾಲವನ್ನು ಯಾವರೀತಿ ಹಿಂದಕ್ಕೆ ಪಡೆದುಕೊಳ್ಳುತ್ತಾರೆ?


ಸಾವಿಗೆ ಕಾರಣ ಯಾವುದೇ ಇರಲಿ, ವೈಯಕ್ತಿಕ ಸಾಲ ಹಿಂದಕ್ಕೆ ಪಡೆಯಲು ಸಂಪರ್ಕಿಸುವುದಕ್ಕಾಗಿ ಮೃತ ವ್ಯಕ್ತಿಯ ಕುಟುಂಬ ಅಥವಾ ಸಹ ಅರ್ಜಿದಾರ ಸರಿಯಾದ ವ್ಯಕ್ತಿ. ವೈಯಕ್ತಿಕ ಸಾಲ ಮರುಪಾವತಿ ಮಾಡಲು ಒಂದು ನಿಗದಿತ ಮರುಪಾವತಿ ಅವಧಿಯನ್ನು ಮಂಜೂರು ಮಾಡಲಾಗುತ್ತದೆ. ಒಂದುವೇಳೆ ಕಾನೂನು ವಾರಸುದಾರರು ಸಾಲವನ್ನು ಮರುಪಾವತಿ ಮಾಡದೇ ಇದ್ದರೆ, ವಾಹನದಂತಹ ಸಾಲಗಾರನ ಭೌತಿಕ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಮತ್ತು ವೈಯಕ್ತಿಕ ಸಾಲ ಮೊತ್ತವನ್ನು ಮರುಪಾವತಿ ಪಡೆದುಕೊಳ್ಳುವುದಕ್ಕಾಗಿ ಅದನ್ನು ಹರಾಜು ಹಕ್ಕು ಸಾಲದಾತರಿಗೆ ಇರುತ್ತದೆ.
 
To Avail Personal Loan
Apply Now

ವೈಯಕ್ತಿಕ ಸಾಲ ಸಾಲ ಪಡೆದಂತಹ ವ್ಯಕ್ತಿಯ ಹೆಸರಿನಲ್ಲಿದ್ದರೆ ಏನಾಗುತ್ತದೆ?


ಮೃತ ವ್ಯಕ್ತಿಯ ಕಾನೂನು ವಾರಸುದಾರರು ಯಾರೂ ಇಲ್ಲದಿದ್ದರೆ, ಮತ್ತು ವೈಯಕ್ತಿಕ ಸಾಲವನ್ನು ಸಾಲಗಾರನ ಹೆಸರಿನಲ್ಲೇ ಪಡೆದುಕೊಂಡಿದ್ದರೆ, ಜವಾಬ್ದಾರಿಯನ್ನು ಹೊರುವ ವ್ಯಕ್ತಿ ಸಾಲ ನಿರ್ವಹಣೆ ಮಾಡುವ ವ್ಯಕ್ತಿಯಾಗಿರುತ್ತಾರೆ. ಇದರ ಅರ್ಥ ನಿರ್ವಹಣೆ ಮಾಡುವ ವ್ಯಕ್ತಿ ತಾನೇ ಹಣ ಮರುಪಾವತಿ ಮಾಡಬೇಕೆಂದಲ್ಲ, ಬದಲಿಗೆ ಸಾಲಪಡೆದ ವ್ಯಕ್ತಿಯ ಆಸ್ತಿಗಳನ್ನು ಸಾಲ ತೀರಿಸಲು ಉಪಯೋಗಿಸಬಹುದು ಎಂದರ್ಥ.
 

ಸಾಲ ಪಡೆದ ವ್ಯಕ್ತಿ ಮೃತಪಟ್ಟ ನಂತರ ವೈಯಕ್ತಿಕ ಸಾಲ ತೀರಿಸಲು ಇರುವ ವಿಧಾನಗಳು ಯಾವುವು?

 
  • ಸಾಲಪಡೆದ ವ್ಯಕ್ತಿಯ ಸಾವಿನ ಬಗ್ಗೆ ಸಾಲನೀಡಿಕೆದಾರ ಸಾಲದಾತರಿಗೆ ತಿಳಿಸಬೇಕು, ಇಲ್ಲವಾದಲ್ಲಿ ಇಎಂಐಗಳನ್ನು ಸಾಮಾನ್ಯ ಫಾರ್ಮಾಟ್ ನಲ್ಲಿ ಪಾವತಿ ಮಾಡುವುದನ್ನು ಪರಿಗಣಿಸಲಾಗುತ್ತದೆ.
  • ಮರುಪಾವತಿ ಮಾಡಬೇಕಾದ ಪೂರ್ಣ ಮತ್ತು ಅಂತಿಮ ಬಾಕಿ ಮೊತ್ತ ತಿಳಿಸಬೇಕೆಂದು ಸಾಲದಾತರಲ್ಲಿ ಮನವಿ ಮಾಡಬೇಕು.
  • ಸಾಲಪಡೆದ ವ್ಯಕ್ತಿ ವೈಯಕ್ತಿಕ ಸಾಲ ವಿಮೆ ಅಥವಾ ಜೀವ ವಿಮೆಯನ್ನು ಆತನ/ಆಕೆಯ ಹೆಸರಿನಲ್ಲಿ ಹೊಂದಿದ್ದಾರೆಯೇ ಎಂದು ಪರಿಶೀಲಿಸಿ. ಸಾಲ ತೀರಿಸುವುದಕ್ಕೆ ಇದನ್ನು ಉಪಯೋಗಿಸಬಹುದು.
  • ವಿಮೆ ಇಲ್ಲದಿದ್ದಲ್ಲಿ, ಸಾಲ ನಿರ್ವಾಹಕರು ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಯಾವುದೇ ಸ್ವಂತ ಆಸ್ತಿ ಅತವಾ ಭೂಮಿ ಇದೆಯೇ ಎಂದು ಸಾಲಪಡೆದ ವ್ಯಕ್ತಿಯ ಕುಟುಂಬದರೊಡನೆ ಕೇಳಿ ತಿಳಿದುಕೊಳ್ಳಬೇಕು.
  • ಒಂದುವೇಳೆ ಸಾಲಗಳನ್ನು ತೀರಿಸುವಷ್ಟು ಆಸ್ತಿಗಳು ಇಲ್ಲದಿದ್ದರೆ, ಸಾಲಪಡೆದ ವ್ಯಕ್ತಿಯ ಹೆಸರಿನಲ್ಲಿ ವೈಯಕ್ತಿಕ ಸಾಲ ಇದ್ದರೆ ಮಾತ್ರಾ ರಿಮೈಂಡರ್ ಬರೆಯುವ ಸಾಧ್ಯತೆ ಇರುತ್ತದೆ.

To Avail Personal Loan
Apply Now