I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ರೂ. 50,000 ಕ್ಕಿಂತ ಹೆಚ್ಚು ಹೂಡಿಕೆಗಳು, ಡಿಪಾಸಿಟ್ ಗಳು ಮತ್ತು ವಹಿವಾಟುಗಳಿಗಾಗಿ ಪ್ಯಾನ್ ಕಾರ್ಡ್ ಎನ್ನುವುದು ಕಡ್ಡಾಯ ದಾಖಲೆಯಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ತುಂಬುವಾಗ, ಹೊಸ ಬ್ಯಾಂಕ್ ಖಾತೆ ತೆರೆಯುವಾಗ, ಅಥವಾ ಸಾಲಗಳಿಗಾಗಿ ಅರ್ಜಿ ಸಲ್ಲಿಸುವಾಗ ಕೂಡಾ ಇದೊಂದು ಅತ್ಯಗತ್ಯ ದಾಖಲೆಯಾಗಿರುತ್ತದೆ. ಸಾಲ ಅರ್ಜಿ ಮತ್ತು ವಿತರಣಾ ಪ್ರಕ್ರಿಯೆಗಳು ಡಿಜಿಟಲೈಸ್ ಆಗಿರುವ ಕಾರಣ, ಸಾಲಕ್ಕಾಗಿ ಮ್ಯಾನುವಲ್ ಮನವಿಗಳು ಕಡಿಮೆಯಾಗಿವೆ.
ವೈಯಕ್ತಿಕ ಸಾಲಕ್ಕಾಗಿ ಸಾಲ ಪಡೆಯುವವರು ಭೌತಿಕ ಪ್ಯಾನ್ ಕಾರ್ಡ್ ಸಲ್ಲಿಸುವ ಅಗತ್ಯವಿಲ್ಲ. ಅದರ ಬದಲಿಗೆ, ಮುಂದುವರಿಯಲು ನೀವು ಪ್ಯಾನ್ ಸಂಖ್ಯೆಯನ್ನು ನಮೂದಿಸಬಹುದು ಅಥವಾ ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸಲು ಆಧಾರ್ ಸಂಖ್ಯೆಯನ್ನು ಉಪಯೋಗಿಸಬಹುದು.
ಕೆಲವು ಸಾಲದಾತರು ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲಕ್ಕಾಗಿ ಪ್ಯಾನ್ ಕಾರ್ಡ್ ಅಗತ್ಯವಾಗಿರುತ್ತದೆ ಏಕೆಂದರೆ ಅದು ಅರ್ಜಿದಾರರ ಹಣಕಾಸು ಸ್ಥಿತಿಗತಿ, ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಮತ್ತು ಹಿಂದಿನ ಏನಾದರೂ ಹಣಕಾಸು ಸಂಬಂಧಿತ ವಂಚನೆ ಕುರಿತಂತೆ ಸ್ಪಷ್ಟತೆ ನೀಡುತ್ತದೆ. ಪ್ಯಾನ್ ಕಾರ್ಡ್ ಇಲ್ಲದಂತೆ ಸಾಲಕ್ಕಾಗಿ ಅರ್ಜಿ ಸಲ್ಲಿಕೆಯು ಸಾಲ ಪರಿಶೀಲನೆ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳನ್ನು ಉಂಟು ಮಾಡುತ್ತದೆ.
ಸಾಲ ಅನುಮೋದನೆಗಾಗಿ ನೀವು ಇತರ ಆದಾಯ ದಾಖಲೆಗಳನ್ನು ಪ್ರಸ್ತುತಪಡಿಸಬಹುದು, ಆದರೆ ಸಾಲ ಪರಿಶೀಲನೆಯು ಪ್ಯಾನ್ ಕಾರ್ಡ್ ಇಲ್ಲದಂತೆ ಪೂರ್ಣವಾಗುವುದಿಲ್ಲ. ಕೆವೈಸಿ ಪರಿಶೀಲನೆಯಲ್ಲಿ ಇದೊಂದು ಪ್ರಮುಖ ಭಾಗವಾಗಿದೆ. ಆದ್ದರಿಂದ ತತ್ ಕ್ಷಣ ಸಾಲ ಅನುಮೋದನೆಗಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸಿದ್ಧವಾಗಿ ಇಟ್ಟುಕೊಳ್ಳಿ. ಸಾಲಗಾರ ಪ್ಯಾನ್ ಕಾರ್ಡ್ ಇಲ್ಲದಂತೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಪ್ರಯತ್ನಿಸಿದಾಗ, ಸಾಲದಾತರಿಗೆ ಅದು ನಿಮ್ಮ ಕುರಿತು ಉತ್ತಮ ಭಾವನೆ ಮೂಡಿಸುವುದಿಲ್ಲ ಮತ್ತು ನಿಮ್ಮ ಅನುಮೋದನೆ ಸ್ಥಿತಿಯ ಮೇಲೆ ಅದು ಪರಿಣಾಮ ಉಂಟುಮಾಡಬಹುದು.
ವೈಯಕ್ತಿಕ ಸಾಲಗಳು ಭದ್ರತೆರಹಿತ ಸಾಲಗಳಾಗಿದ್ದು, ಭದ್ರತೆಸಹಿತ ಸಾಲಗಳಿಗೆ ಹೋಲಿಕೆ ಮಾಡಿದಲ್ಲಿ ಮೇಲಾಧಾರ ಅಗತ್ಯವಿರುವುದಿಲ್ಲ ಮತ್ತು ಕಡಿಮೆ ದಾಖಲೆಗಳು ಅಗತ್ಯವಿರುತ್ತದೆ. ಸಾಲದಾತರು ಪ್ಯಾನ್ ಕಾರ್ಡ್ ಇಲ್ಲದಂತೆಯೇ ನಿಮ್ಮ ಸಾಲವನ್ನು ಅನುಮೋದಿಸುತ್ತಿದ್ದರೆ ಸಾಲಕ್ಕಾಗಿ ಕೇಳುವ ಮುನ್ನ ಅವರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ.
ಭಾರತದಲ್ಲಿನ ಹೆಚ್ಚಿನ ಸಾಲದಾತರು, ವೈಯಕ್ತಿಕ ಸಾಲಗಳಿಗಾಗಿ ತಮ್ಮ ಅರ್ಹತಾ ಮಾನದಂಡವನ್ನು ಸ್ಪಷ್ಟವಾಗಿ ನಿಗದಿ ಪಡಿಸಿದ್ದು, ಇದರಲ್ಲಿ ತತ್ ಕ್ಷಣ ಸಾಲ ಪಡೆಯುವುದಕ್ಕೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಕಡ್ಡಾಯ ದಾಖಲೆಗಳಂತೆ ಸಲ್ಲಿಸಬೇಕೆಂಬುದನ್ನು ಸ್ಪಷ್ಟವಾಗಿ ತಿಳಿಸಿವೆ. ಆದ್ದರಿಂದ, ನೀವು ಪ್ಯಾನ್ ಕಾರ್ಡ್ ಇಲ್ಲದಂತೆಯೇ ಸಾಲ ಕುರಿತು ಆಲೋಚಿಸುತ್ತಿದ್ದಲ್ಲಿ, ಸಾಲ ಅನುಮೋದನೆಗಾಗಿ ಅದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ. ಪ್ಯಾನ್ ಕಾರ್ಡ್ ನೊಂದಿಗೆ ಸಾಲಗಾರರು 50,000 ರೂ. ಅಥವಾ ಅದಕ್ಕಿಂತ ಹೆಚ್ಚು ಸಾಲವನ್ನು ಪಡೆದುಕೊಳ್ಳಬಹುದು.
ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕಾಗಿ ನೀವು ಒಂದು ಇನ್ಸ್ ಟೆಂಟ್ ಸಾಲ ಆಪ್ ತೆರೆದಾಗ, ಮೂದಲು ಅರ್ಹತಾ ಮಾನದಂಡವನ್ನು ಓದಿ ಮತ್ತು ನಂತರ ಸಾಲ ಅರ್ಜಿಗಾಗಿ ಮುಂದುವರಿಯಿರಿ. ಭಾರತದಲ್ಲಿನ ಹೆಚ್ಚ್ಚಿನ ವೈಯಕ್ತಿಕ ಸಾಲ ಆಪ್ ಗಳು ಸಾಲ ಅನುಮೋದನೆಗಾಗಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಕಡ್ಡಾಯ ದಾಖಲೆಗಳೆಂದು ಸ್ಪಷ್ಟವಾಗಿ ಸೂಚಿಸಿವೆ. ಆದ್ದರಿಂದ, ಪ್ಯಾನ್ ಕಾರ್ಡ್ ಇಲ್ಲದಂತೆಯೇ ಸಾಲವನ್ನು ನೀವು ಊಹಿಸಿದಲ್ಲಿ, ಆ ಚಿಂತನೆಯನ್ನು ಬಿಟ್ಟು ಬಿಡಿ ಮತ್ತು ಆನ್ಲೈನ್ ವೈಯಕ್ತಿಕ ಸಾಲಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಕೈಗೆ ಸಿಗುವ ಹಾಗೆ ಇರಿಸಿಕೊಂಡಿರಿ.
ಸಾಲಗಾರನ ಹಣಕಾಸು ಇತಿಹಾಸವನ್ನು ಪರಿಶೀಲಿಸುವುದಕ್ಕೆ ಪ್ಯಾನ್ ಕಾರ್ಡ್ ಒಂದು ಮುಖ್ಯವಾದ ದಾಖಲೆಯಾಗಿದೆ. ಆದ್ದರಿಂದ, ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಸಾಲದಾತರು ವೈಯಕ್ತಿಕ ಸಾಲಗಳನ್ನು ಖಂಡಿತವಾಗಿಯೂ ಅನುಮೋದಿಸುವುದಿಲ್ಲ. ವೈಯಕ್ತಿಕ ಸಾಲಕ್ಕಾಗಿ ಪ್ಯಾನ್ ಕಾರ್ಡ್ ಸಲ್ಲಿಸುವುದಕ್ಕೆ ನೀವು ಹಿಂಜರಿದರೆ, ನಿಮ್ಮ ಹಣಕಾಸು ಇತಿಹಾಸ ಕುರಿತಂತೆ ನಿಮಗೇ ನಂಬಿಕೆ ಇಲ್ಲ ಎಂಬ ಭಾವನೆ ಮೂಡುತ್ತದೆ. ಆದ್ದರಿಂದ, ಆನ್ಲೈನ್ ವೈಯಕ್ತಿಕ ಸಾಲಕ್ಕಾಗಿ ದಯವಿಟ್ಟು ಪ್ಯಾನ್ ಕಾರ್ಡ್ ಗೆ ಪ್ರಾಧಾನ್ಯತೆ ನೀಡಿ.
ವೈಯಕ್ತಿಕ ಸಾಲ ಅನುಮೋದನೆಗೆ ಪ್ಯಾನ್ ಕಾರ್ಡ್ ಪ್ರಯೋಜನ ನೀಡುತ್ತದೆ ಮತ್ತು ಸಾಲವನ್ನು ತ್ವರಿತವಾಗಿ ವಿತರಿಸುವುದಕ್ಕೆ ಸಾಲದಾತರ ನಂಬಿಕೆಯನ್ನು ಹೆಚ್ಚಳ ಮಾಡುತ್ತದೆ. ಪ್ಯಾನ್ ಕಾರ್ಡ್ ಇಲ್ಲದ ವೈಯಕ್ತಿಕ ಸಾಲದ ಅನುಮೋದನೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಅಥವಾ ಸಾಲ ಮಂಜೂರಾಗದೇ ಇರಬಹುದು. ಆದ್ದರಿಂದ, ಆನ್ಲೈನ್ ನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಸಾಲಗಾರರು ಪ್ಯಾನ್ ಕಾರ್ಡ್ ಅನ್ನು ಇರಿಸಿಕೊಂಡಿರುವುದು ಯಾವಾಗಲೂ ಪ್ರಯೋಜನಕಾರಿಯಾಗಿರುತ್ತದೆ.
ಪ್ಯಾನ್ ಕಾರ್ಡ್ ನೊಂದಿಗೆ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕಾಗಿ ಹೀರೋಫಿನ್‌ಕಾರ್ಪ್ ನಂತಹ ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ. ವೈಯಕ್ತಿಕ ಸಾಲ ಅರ್ಜಿಯನ್ನು ಸಂಪೂರ್ಣವಾಗಿ ತುಂಬಿದ ನಂತರದ ಹಂತ ದಾಖಲೆಗಳ ಪರಿಶೀಲನೆಯಾಗಿದ್ದು, ಇದಕ್ಕಾಗಿ ಇ-ಕೆವೈಸಿ ಪರಿಶೀಲನೆ ಬೇಕಾಗುತ್ತದೆ. ಈ ಹಂತದಲ್ಲಿ, ಸಾಲಗಾರರು ಪರಿಶೀಲನೆಗಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ನೀವು ಪ್ಯಾನ್ ಕಾರ್ಡ್ ನೊಂದಿಗೆ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕಾದ ರೀತಿ ಇದಾಗಿದೆ.
ಉತ್ತರ: ಹೌದು, ಕೆಲವು ಸಾಲದಾತರಿಂದ ನೀವು ಪ್ಯಾನ್ ಕಾರ್ಡ್ ಇಲ್ಲದಂತೆಯೇ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಅದರ ಬದಲು, ಸಾಧಾರಣ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಮತ್ತು ಚಾಲನಾ ಪರವಾನಗಿಯಂತಹ ಇತರ ಕೆವೈಸಿ ದಾಖಲೆಗಳನ್ನು ಉಪಯೋಗಿಸಿ.
ಉತ್ತರ: ಹೌದು, ಶಿಕ್ಷಣ ಸಾಲಕ್ಕಾಗಿ ಪ್ಯಾನ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಹೆಚ್ಚಿನ ಹಣಕಾಸು ಸಂಸ್ಥೆಗಳು ಶಿಕ್ಷಣ ಸಾಲಕ್ಕಾಗಿ ತಮ್ಮ ಬ್ಯಾಂಕ್ ನಲ್ಲಿ ನೋಂದಣಿ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಪ್ಯಾನ್ ಕಾರ್ಡ್ ಸಲ್ಲಿಸುವುದನ್ನು ಕಡ್ಡಾಯ ಗೊಳಿಸಿವೆ.
ಉತ್ತರ: ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಿಳಿದುಕೊಳ್ಳಲು ಅಧಿಕೃತ ಹಣಕಾಸು ಸೇವೆಗಳ ಜಾಲತಾಣ ಸಂದರ್ಶಿಸಿ. ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ರೆಡಿಟ್ ಸ್ಕೋರ್ ಗಾಗಿ ನಿಮ್ಮ ಮನವಿಯನ್ನು ಸಲ್ಲಿಸಿ. ಅಧಿಕ ಕ್ರೆಡಿಟ್ ಸ್ಕೋರ್ ಸಾಲಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್ ಅರ್ಹತೆಯನ್ನು ಖಚಿತಪಡಿಸುತ್ತದೆ.
ಉತ್ತರ: ಪ್ಯಾನ್ ಕಾರ್ಡ್ ಇಲ್ಲದಂತೆಯೇ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಅನಿಶ್ಚಿತವಾಗಿರುತ್ತದೆ ಏಕೆಂದರೆ, ದಾಖಲೆಗಳ ಪರಿಶೀಲನೆಗಾಗಿ ಪ್ಯಾನ್ ಕಾರ್ಡ್ ನಿರ್ಣಾಯಕ ಕೆವೈಸಿ ದಾಖಲೆ ಎನಿಸಿಕೊಳ್ಳುತ್ತದೆ.
ಉತ್ತರ: ಅಧಿಕೃತ ಇನ್ಸ್ ಟೆಂಟ್ ಸಾಲ ಆಪ್ ಅಥವಾ ಜಾಲತಾಣಗಳಲ್ಲಿ, ಪ್ಯಾನ್ ಕಾರ್ಡ್ ಇಲ್ಲದಂತೆಯೇ ಸಾಲ ಅನುಮೋದನೆ ಪಡೆದುಕೊಳ್ಳುವುದಕ್ಕೆ ಬಹುತೇಕ ಯಾವುದೇ ಭರವಸೆ ಇರುವುದಿಲ್ಲ. ಆದಾಗ್ಯೂ, ಅಪರೂಪದ ಪ್ರಕರಣಗಳಲ್ಲಿ, ಸಾಲದಾತನೊಂದಿಗೆ ದೀರ್ಘಾವಧಿಯ ಬಾಂಧವ್ಯವನ್ನು ನೀವು ಸೂಚಿಸಿದ್ದಲ್ಲಿ, ಈಗಾಗಲೇ ಇರುವ ನಂಬಿಕೆಯ ಅಂಶದ ಆಧಾರದ ಮೇಲೆ ಪ್ಯಾನ್ ಕಾರ್ಡ್ ಇಲ್ಲದಂತೆಯೇ ನಿಮ್ಮ ಸಾಲ ಅರ್ಜಿಯನ್ನು ಪರಿಗಣಿಸಬಹುದಾದ ಸಾಧ್ಯತೆಗಳು ಇರುತ್ತವೆ.
ಉತ್ತರ: ಸಾಲ ಅನುಮೋದನೆ ನೀಡುವುದಕ್ಕೆ ಮೊದಲು, ಸಾಲಗಾರರ ದೀರ್ಘಾವಧಿ ಹಣಕಾಸು ನಡವಳಿಕೆ ಮತ್ತು ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಲು ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ.
ಉತ್ತರ: ಪ್ಯಾನ್ ಕಾರ್ಡ್ ಇಲ್ಲದಂತೆಯೇ ನೀವು ಆನ್ಲೈನ್ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪ್ಯಾನ್ ಕಾರ್ಡ್ ನ ಅನುಪಸ್ಥಿತಿಯಲ್ಲಿ, ಇ-ಕೆವೈಸಿ ಪರಿಶೀಲನೆ ಅಪೂರ್ಣವಾಗಿ ಉಳಿದುಕೊಳ್ಳುತ್ತದೆ ಮತ್ತು ದಾಖಲೆಗಳ ಪರಿಶೀಲನಾ ಹಂತ, ಬಾಕಿಉಳಿದಿದೆ ಎನ್ನುವ ಸ್ಟೇಟಸ್ ಪ್ರದರ್ಶಿಸುತ್ತದೆ.
ಉತ್ತರ: ಇಲ್ಲ, ಪ್ಯಾನ್ ಕಾರ್ಡ ಇಲ್ಲದಂತೆಯೇ ಸಾಲಕ್ಕಾಗಿ ಅರ್ಜಿ ಸಲ್ಲಿಸಬಾರದೆಂದು ಸಲಹೆ ಮಾಡಲಾಗಿದೆ ಏಕೆಂದರೆ ಸಾಲಗಾರನ ಪ್ರೊಫೈಲ್ ನ ಆದಾಯ ಪರಿಶೀಲನೆ ಹಾಗೂ ಕ್ರೆಡಿಟ್ ಪರಿಶೀಲನೆಗೆ ಇದೇ ಮೂಲವಾಗಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಪರಿಶೀಲನೆಯಾದ ನಂತರವಷ್ಟೇ, ವೈಯಕ್ತಿಕ ಸಾಲ ಮಂಜೂರು ಮಾಡಲಾಗುತ್ತದೆ.
ಉತ್ತರ: ಪ್ಯಾನ್ ಕಾರ್ಡ್ ಇಲ್ಲದಂತೆಯೇ ವೈಯಕ್ತಿಕ ಸಾಲಗಳನ್ನು ಅನುಮೋದನೆ ಮಾಡುವಂತಹ ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಗಳು ಭಾರತದಲ್ಲಿ ಅತ್ಯಂತ ಕಡಿಮೆ ಇವೆ.
ಉತ್ತರ: ನೀವು ಸಿಐಬಿಐಎಲ್ ಜಾಲತಾಣ ಸಂದರ್ಶಿಸಬಹುದು, ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ, ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಕಂಡುಬರುವವರೆಗೂ ನಿರೀಕ್ಷಿಸಿ. ವೈಯಕ್ತಿಕ ಸಾಲಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್ ಅರ್ಹತೆಯನ್ನು ಅಧಿಕ ಸ್ಕೋರ್ ಖಚಿತಪಡಿಸುತ್ತದೆ.