I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಈ ಮೊದಲು ಸಾಲ ಮಂಜೂರಾತಿಗೆ ಮುನ್ನ ಔಪಚಾರಿಕತೆಗಳ ಪಟ್ಟಿಯೇ ಸಾಲ ಪ್ರಕ್ರಿಯೆಯಲ್ಲಿ ಒಳಗೊಂಡಿತ್ತು, ಆದ್ದರಿಂದ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಮೇಲೆ ವೈಯಕ್ತಿಕ ಸಾಲ ಲಭ್ಯವಿರಲಿಲ್ಲ. ಇನ್ಸ್ ಟೆಂಟ್ ಸಾಲ ಆಪ್ ಗಳ ಜನಪ್ರಿಯತೆಯೊಂದಿಗೆ ವೈಯಕ್ತಿಕ ಸಾಲ ಅನುಮೋದನೆ ಕಾಗದರಹಿತವಾಯಿತು ಮತ್ತು ಇಲ್ಲಿ ದಾಖಲೆ ಪರಿಶೀಲನೆಗಾಗಿ ಆಧಾರ್ ಕಾರ್ಡ್ಸ್ ಮತ್ತು ಪ್ಯಾನ್ ಕಾರ್ಡ್ಸ್ ಪ್ರಮುಖ ಪಾತ್ರ ನಿರ್ವಹಿಸುತ್ತವೆ.
ವೈಯಕ್ತಿಕ ಸಾಲ ಎನ್ನುವುದು ಗೃಹ ಸಾಲಗಳಂತಲ್ಲದೇ ಒಂದು ಭಧ್ರತೆರಹಿತ ಸಾಲವಾಗಿದೆ. ಮನೆಯ ನವೀಕರಣ, ವಿವಾಹ ಖರ್ಚುಗಳು, ಲ್ಯಾಪ್ ಟಾಪ್ ಅಥವಾ ಮೊಬೈಲ್ ಖರೀದಿ ಈಗ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳೊಂದಿಗೆ ಕೇವಲ ಕನಿಷ್ಠ ದಾಖಲೆ ಸಲ್ಲಿಕೆಯಿಂದ ಸಾಧ್ಯವಾಗುತ್ತಿದೆ. ಹಣದ ತುರ್ತು ಅಗತ್ಯವಿರುವ ವ್ಯಕ್ತಿಗಳಿಗೆ ವೈಯಕ್ತಿಕ ಸಾಲ ಒಂದು ಪರಿಹಾರದ ರೂಪದಲ್ಲಿ ಬಂದಿದೆ. ವೈದ್ಯಕೀಯ ತುರ್ತು ಸ್ಥಿತಿಯಲ್ಲಿ ಇದು ಜೀವರಕ್ಷಕದಂತೆ ಕೆಲಸ ಮಾಡುತ್ತದೆ.
ಆದ್ದರಿಂದ ಭಾರತದಲ್ಲಿನ ಹಣಕಾಸು ಕಂಪೆನಿಗಳು ವೈಯಕ್ತಿಕ ಸಾಲ ಅನುಮೋದನೆಗೆ ಅಗತ್ಯವಾದ ಕಡ್ಡಾಯ ದಾಖಲೆಗಳ ಪಟ್ಟಿಯನ್ನು ಕಡಿಮೆ ಮಾಡಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನ ಕೆವೈಸಿ ಪರಿಶೀಲನೆಯೊಂದಿಗೆ ಕೂಡಾ, ಸಾಲಪಡೆಯುವವರು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಈಗಿನ ದಿನಗಳಲ್ಲಿ ಹೆಚ್ಚಿನ ಇನ್ಸ್ ಟೆಂಟ್ ಲೋನ್ ಆಪ್ ಗಳಲ್ಲಿ, ನಿಮ್ಮ ಮೊಬೈಲ್ ನಂಬರ್ ನೊಂದಿಗೆ ನೋಂದಣಿಯಾಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆ ಉಪಯೋಗಿಸಿ ಮಾಡಲಾಗುವ ದಾಖಲೆ ಸಲ್ಲಿಕೆ ಕಾಗದರಹಿತವಾಗಿದೆ.
ತಾಂತ್ರಿಕ ಆವಿಷ್ಕಾರ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆಯೆಂದರೆ, ಈಗ ಸಾಲ ಪಡೆಯುವವರು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನ ಆಧಾರದ ಮೇಲೆ ಇನ್ಸ್ ಟೆಂಟ್ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಕೆವೈಸಿ ದಾಖಲೆಗಳ ಮೇಲೆ ವೈಯಕ್ತಿಕ ಸಾಲವು (ಆಧಾರ್ ಮತ್ತು ಪ್ಯಾನ್) ಸಾಲ ಮಂಜೂರಾತಿ ಪ್ರಕ್ರಿಯೆ ಸಂಪೂರ್ಣ ಕಾಗದರಹಿತವಾಗಿದೆ ಮತ್ತು ಇದು ಸಾಲ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಈಗಿನ ಪ್ರಸಕ್ತ ಡಿಜಿಟಲ್ ಯುಗದಲ್ಲಿ, ಕನಿಷ್ಠ ದಾಖಲೆಗಳೊಂದಿಗೆ ಸಾಲ ಪಡೆದುಕೊಳ್ಳುವುದಕ್ಕೆ ಹಣಕಾಸು ಸಂಸ್ಥೆಗಳು ಒಂದು ಸುಲಭ ಮಾರ್ಗವನ್ನು ರಚಿಸಿವೆ. ಅರ್ಜಿ ನಮೂನೆಗಳನ್ನು ಮತ್ತು ಭೌತಿಕ ದಾಖಲೆಗಳನ್ನು ಸಲ್ಲಿಸುವ ಸಾಂಪ್ರದಾಯಿಕ ವಿಧಾನದಲ್ಲದಂತೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಉಪಯೋಗಿಸಿ ಸಾಲ ಪಡೆದುಕೊಳ್ಳುವುದಕ್ಕೆ ಆನ್ಲೈನ್ ವೈಯಕ್ತಿಕ ಸಾಲ ಎನ್ನುವುದು ತ್ವರಿತ ಮತ್ತು ಸುಲಭ ಮಾರ್ಗವಾಗಿದೆ.
ವೈಯಕ್ತಿಕ ಸಾಲ ಅನುಮೋದನೆ ನಿಮಿಷಗಳಲ್ಲಿ ಸಾಧ್ಯವೆಂದು ಮತ್ತು 24 ಗಂಟೆಗಳೊಳಗಾಗಿ ಸಾಲ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆಂದು ಈ ಮೊದಲು ಯಾರೂ ಊಹೆ ಕೂಡಾ ಮಾಡಿರಲಿಲ್ಲ. ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಗಳೊಂದಿಗೆ ಸಾಲ ಪ್ರಕ್ರಿಯೆ ಮಾರ್ಗ ಬದಲಾಗಿದ್ದು, ಸಾಲ ಪಡೆಯುವವರ ಪ್ರೊಫೈಲ್ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮೂಲಕ ಪರಿಶೀಲನೆಯಾಗುತ್ತದೆ. ಒಂದು ಗೊಂದಲ-ಮುಕ್ತ ವಿಧಾನದಲ್ಲಿ ಆನ್ಲೈನ್ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಆಧಾರ್ ಮತ್ತು ಪ್ಯಾನ್ ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಸಂಬಂಧಿತ ತಾಜಾ ಮಾಹಿತಿಯನ್ನು ತಿಳಿದುಕೊಳ್ಳುತ್ತಿರಿ.
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳು ಇ-ಕೆವೈಸಿ ಪರಿಶೀಲನೆಗಾಗಿ ಎರಡು ಪ್ರಮುಖ ದಾಖಲೆಗಳಾಗಿದ್ದು, ಅನೇಕ ಸಾಲದಾತರ ಅರ್ಹತಾ ಮಾನದಂಡದ ಒಂದು ಪ್ರಮುಖ ಭಾಗವಾಗಿರುತ್ತದೆ.
ಆನ್ಲೈನ್ ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಗಳು ಇತ್ತೀಚಿನ ಟ್ರೆಡ್ ಆಗಿವೆ, ಮತ್ತು ಕೇವಲ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಲ್ಲಿಸುವುದರೊಂದಿಗೆ ಕಾಗದರಹಿತ ದಾಖಲೆ ಸಲ್ಲಿಕೆಯು ಸಾಲ ಅರ್ಜಿದಾರರಿಗೆ ಬಹಳ ಸುಲಭವೆನಿಸಿದೆ. ಇನ್ಸ್ ಟೆಂಟ್ ನಗದು ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಇರುವುದಿಲ್ಲ ಮತ್ತು ಇದು ಕೇವಲ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಆನ್ಲೈನ್ ಸಲ್ಲಿಕೆಯನ್ನು ಆಧರಿಸಿರುತ್ತದೆ. ಆದಾಗ್ಯೂ, ಇದು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು. ಕೆಲವು ಸಾಲದಾತರು ರೆಕಾರ್ಡ್ ಗಳಿಗಾಗಿ ಕೆವೈಸಿ ದಾಖಲೆಗಳ ಬೌತಿಕ ಪ್ರತಿಗಳಿಗಾಗಿ ಕೇಳಬಹುದು. ಇನ್ಸ್ ಟೆಂಟ್ ಸಾಲ ಅರ್ಜಿಯು 24 ಗಂಟೆಗಳೊಳಗಾಗಿ ತಕ್ಷಣವೇ ಅನುಮೋದನೆಯಾಗುತ್ತದೆ.
ಅಂತಿಮವಾಗಿ, ಒಂದು ತತ್ ಕ್ಷಣದ ಸಾಲಕ್ಕಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳು ಎರಡು ಅತ್ಯಗತ್ಯ ದಾಖಲೆಗಳಾಗಿವೆ. ಏಪ್ರಿಲ್ 2010 ರಲ್ಲಿ ಪರಿಚಯಿಸಲಾದ ಆಧಾರ್ ಕಾರ್ಡ್, ಸಾಲದ ದೃಶ್ಯಾವಳಿಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿತು. ಸಾಲ ಅನುಮೋದನೆಗಾಗಿ ದೀರ್ಘ ಗಂಟೆಗಳವರೆಗೆ ಸರತಿ ಸಾಲಿನಲ್ಲಿ ನಿಂತು ಕಾಯುವುದು ಈಗ ಹಳೆಯ ಮಾತಾಯಿತು. ಈಗ ವೈಯಕ್ತಿಕ ಸಾಲಕ್ಕಾಗಿ ಕೆವೈಸಿ ದಾಖಲೆಗಳೊಂದಿಗೆ, ಗ್ರಾಹಕರು ತತ್ ಕ್ಷಣ ಸಾಲ ಅನುಮೋದನೆ ಪಡೆಯುವ ಪ್ರಯೋಜನವನ್ನು ಹೊಂದಿದ್ದಾರೆ.
ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬಹಳ ಮಹತ್ವದ್ದಾಗಿವೆ. ಬಯೋಮೆಟ್ರಿಕ್ ಪರಿಶೀಲನೆಗೆ ನಿಮ್ಮ ಅರ್ಹತಾ ಮಾನದಂಡವನ್ನು ಆಧಾರ್ ಕಾರ್ಡ್ ಪೂರೈಸಿದರೆ, ಪ್ಯಾನ್ ಕಾರ್ಡ್ ಸಾಲಗಾರನ ಹಣಕಾಸು ಮತ್ತು ತೆರಿಗೆ ಚಟುವಟಿಕೆಯನ್ನು ಪರಿಶೀಲಿಸುತ್ತದೆ. ಆದ್ದರಿಂದ ವೈಯಕ್ತಿಕ ಸಾಲ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸುವ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಸಿದ್ಧವಾಗಿ ಇರಿಸಿಕೊಳ್ಳಿ.
ಉತ್ತರ: ಹೌದು, ಇನ್ಸ್ ಟೆಂಟ್ ಸಾಲ ಆಪ್ ಗಳ ಮೂಲಕ ಆನ್ಲೈನ್ ವೈಯಕ್ತಿಕ ಸಾಲ ಪಡೆದುಕೊಳ್ಳುವ ಸಮಯದಲ್ಲಿ ಸಲ್ಲಿಸಬೇಕಾದ ಕಡ್ಡಾಯ ದಾಖಲೆಗಳ ಪೈಕಿ ಪ್ಯಾನ್ ಕಾರ್ಡ್ ಕೂಡಾ ಒಂದು. ಆದರೆ ಕೇವಲ ಪ್ಯಾನ್ ಕಾರ್ಡ್ ಸಾಲ ಅನುಮೋದನೆಗೆ ಸಹಾಯ ಮಾಡುವುದಿಲ್ಲ. ಸಾಲ ಪಡೆಯುವವರು ಸಾಲ ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡನ್ನೂ ಸಲ್ಲಿಸಬೇಕಾಗುತ್ತದೆ.
ಉತ್ತರ: ಹೌದು, ಇನ್ಸ್ ಟೆಂಟ್ ಸಾಲ ಆಪ್ ಗಳ ಮೂಲಕ ಆನ್ಲೈನ್ ವೈಯಕ್ತಿಕ ಸಾಲ ಪಡೆದುಕೊಳ್ಳುವ ಸಮಯದಲ್ಲಿ ಸಲ್ಲಿಸಬೇಕಾದ ಕಡ್ಡಾಯ ದಾಖಲೆಗಳ ಪೈಕಿ ಆಧಾರ್ ಕಾರ್ಡ್ ಕೂಡಾ ಒಂದು. ಆದರೆ ಕೇವಲ ಆಧಾರ್ ಕಾರ್ಡ್ ಸಾಲ ಅನುಮೋದನೆಗೆ ಸಹಾಯ ಮಾಡುವುದಿಲ್ಲ. ಸಾಲ ಪಡೆಯುವವರು ಸಾಲ ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡನ್ನೂ ಸಲ್ಲಿಸಬೇಕಾಗುತ್ತದೆ.
ಉತ್ತರ: ಸಾಲದಾತರಿಗೆ ಸಾಲಗಾರರ ಸಾಲಯೋಗ್ಯತೆ ಮತ್ತು ಹಣಕಾಸು ಇತಿಹಾಸ ಪರಿಶೀಲಿಸುವುದಕ್ಕಾಗಿ ಅವರ ಪ್ಯಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಒಂದು ವೇಳೆ ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಪ್ಯಾನ್ ಕಾರ್ಡ್ ಪ್ರತಿಬಿಂಬಿಸಿದಲ್ಲಿ, ವೈಯಕ್ತಿಕ ಸಾಲ ಅನುಮೋದನೆ ಕೂಡಾ ಉತ್ತಮವಾಗಿರುತ್ತದೆ!
ಉತ್ತರ: ಸಾಲ ಮೊತ್ತ ಎನ್ನುವುದು ಹಲವು ಅಂಶಗಳಿಗೆ ಒಳಪಟ್ಟಿರುವ ವಿಷಯವಾಗಿರುತ್ತದೆ. ಆಧಾರ್ ಕಾರ್ಡ್ ಆಗಿರಲಿ ಅಥವಾ ಪ್ಯಾನ್ ಕಾರ್ಡ್ ಆಗಿರಲಿ, ಅಗತ್ಯವಿರುವ ಸಾಲದ ಮೊತ್ತ ಸಾಲಗಾರರ ಆಯ್ಕೆಅಗತ್ಯವಾಗಿರುತ್ತದೆ, ಸಾಲ ಮಂಜೂರಾತಿಗೆ ಸಾಲದಾತರು ಮಿತಿಯನ್ನು ನಿಗದಿ ಪಡಿಸಿರುತ್ತಾರೆ. ಕೆಲವು ಸಾಲದಾತರು 2 ಲಕ್ಷ ರೂಪಾಯಿವರೆಗೂ ವೈಯಕ್ತಿಕ ಸಾಲಗಳನ್ನು ನೀಡುತ್ತಾರೆ ಮತ್ತು ಕೆಲವರು 5 ಲಕ್ಷ ರೂಪಾಯಿವರೆಗೂ ತತ್ ಕ್ಷಣ ಸಾಲಗಳನ್ನು ಅನುಮೋದಿಸುತ್ತಾರೆ.
ಉತ್ತರ: ಹೌದು, ನೀವು ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಗಳ ಮೂಲಕ ಆಧಾರ್ ಕಾರ್ಡ್ ನಿಂದ ಸಾಲ ಪಡೆದುಕೊಳ್ಳಬಹುದಾಗಿದೆ. ಆನ್ಲೈನ್ ನಲ್ಲಿ ಇನ್ಸ್ ಟೆಂಟ್ ಸಾಲ ಮಂಜೂರಾತಿ ಪಡೆದುಕೊಳ್ಳುವುದಕ್ಕೆ ಕಡ್ಡಾಯ ದಾಖಲೆಗಳ ಪೈಕಿ ಆಧಾರ್ ಕಾರ್ಡ್ ಕೂಡಾ ಒಂದೆನಿಸಿದೆ.
ಉತ್ತರ: ಹೌದು, ನೀವು ಆಧಾರ್ ಕಾರ್ಡ್ ಮೇಲೆ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಹೆಸರು, ವಯಸ್ಸು, ವಿಳಾಸ ಮತ್ತು ರಾಷ್ಟ್ರೀಯತೆ ಸೇರಿದಂತೆ ವೈಯಕ್ತಿಕ ಗುರುತಿನ ಪರಿಶೀಲನೆಗಾಗಿ ಇದೊಂದು ಕಡ್ಡಾಯ ದಾಖಲೆಯಾಗಿದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಉತ್ತರ: ಆಧಾರ್ ಕಾರ್ಡ್ ಮೂಲಕ ಇನ್ಸ್ ಟೆಂಟ್ ಸಾಲಗಳನ್ನು ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಗಳ ಮೂಲಕ ಪಡೆದುಕೊಳ್ಳಬಹುದು. ಆನ್ಲೈನ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ಅದರಲ್ಲಿ ಕೆವೈಸಿ ಪರಿಶೀಲನೆ ಪ್ರಕ್ರಿಯೆ ಕೂಡಾ ಒಳಗೊಂಡಿರುತ್ತದೆ. ಇಲ್ಲಿ, ಕಾಗದ ರಹಿತ ಫಾರ್ಮಾಟ್ ನಲ್ಲಿ ಸಲ್ಲಿಸಬೇಕಾಗಿರುವ ಕಡ್ಡಾಯ ದಾಖಲೆಗಳ ಪೈಕಿ ಆಧಾರ್ ಕಾರ್ಡ್ ಒಂದು.
ಉತ್ತರ: ಗೂಗಲ್ ಪ್ಲೇ ಸ್ಟೋರ್ ನಿಂದ ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ. ನಿಮ್ಮ ಮೂಲ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ. ದಾಖಲೆಯ ಪರಿಶೀಲನೆ ಹಂತದಲ್ಲಿ, ನಿಮ್ಮ ಮೊಬೈಲ್ ಸಂಖ್ಯೆ ಜೋಡಿಸಲಾಗಿರುವ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಇದೊಂದು ರಿಯಲ್ ಟೈಮ್ ಪ್ರಕ್ರಿಯೆಯಾಗಿದ್ದು, ಕಾಗದರಹಿತ ಫಾರ್ಮಾಟ್ ನಲ್ಲಿ ಪ್ಯಾನ್ ಕಾರ್ಡ್ ನಂತರ ಇತರ ದಾಖಲೆಗಳ ಸಲ್ಲಿಕೆ ಕೂಡಾ ಒಳಗೊಂಡಿರುತ್ತದೆ.
ಉತ್ತರ: ಸಾಲದಾತರು ಪ್ಯಾನ್ ಕಾರ್ಡ್ ಮೂಲಕ ಸಾಲಗಾರರ ಮರುಪಾವತಿ ಸಾಮರ್ಥ್ಯ, ಹಣಕಾಸು ಇತಿಹಾಸ, ಸಾಲ ಮರುಪಾವತಿ ಅಭ್ಯಾಸಗಳು, ಮತ್ತು ಕ್ರೆಡಿಟ್ ಸ್ಕೋರ್ ಗಳನ್ನು ಪರಿಶೀಲಿಸುತ್ತಾರೆ. ಈ ಮಾನದಂಡಗಳನ್ನೆಲ್ಲಾ ಪೂರೈಸುವ ಸಾಲಗಾರರ ಪ್ರೊಫೈಲ್ ಪ್ಯಾನ್ ಕಾರ್ಡ್ ನಿಂದ ಇನ್ಸ್ ಟೆಂಟ್ ಸಾಲ ಪಡೆದುಕೊಳ್ಳುತ್ತದೆ.