I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಜೀವನ ಯಾವಾಗಲೂ ಅನಿರೀಕ್ಷಿತವಾಗಿರುವುದರಿಂದ ಅನೇಕರು ತಮ್ಮ ಹಣಕಾಸು ವ್ಯವಹಾರವನ್ನು ಬಹಳ ಮುಂಚಿತವಾಗಿಯೇ ಯೋಜಿಸುತ್ತಾರೆ. ಅಪಘಾತ, ಗಾಯ ಅಥವಾ ಸಾಲಪಡೆದ ವ್ಯಕ್ತಿಯ ಸಾವು ಇಂತಹ ಅನಿರೀಕ್ಷಿತ ಮತ್ತು ದುರದೃಷ್ಟಕರ ಪರಿಸ್ಥಿತಿಗಳು ಕುಟುಂಬಕ್ಕೆ ಭಾರೀ ನಷ್ಟ ಉಂಟುಮಾಡಬಹುದು. ಆದರೆ ಸಾಲಪಡೆದ ವ್ಯಕ್ತಿ ಮೃತಪಟ್ಟರೆ ಸಾಲ ಏನಾಗುತ್ತದೆ. ಮರುಪಾವತಿಯ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಸಾಲ ಪಡೆದಿರುವ ವ್ಯಕ್ತಿಯ ಜೀವಂತವಾಗಿಲ್ಲದಿರುವಾಗ ತಮ್ಮ ಇಎಂಐಗಳ ಹಿಂಪಾವತಿ ಪಡೆದುಕೊಳ್ಳುವುದಕ್ಕಾಗಿ ಹಣಕಾಸು ಸಂಸ್ಥೆಗಳು ಏನು ಮಾಡುತ್ತವೆ? ವೈಯಕ್ತಿಕ ಸಾಲ ಪಡೆದುಕೊಳ್ಳುವಾಗ ಈ ಎಲ್ಲಾ ಪ್ರಶ್ನೆಗಳು ತಲೆ ಎತ್ತುತ್ತವೆ ಆದರೆ ಸಾಲಪಡೆದ ವ್ಯಕ್ತಿ ಜೀವಂತವಿಲ್ಲದಿರುವಾಗ ಮರುಪಾವತಿ ಕಷ್ಟವಾಗುತ್ತದೆ.
ವಿಭಿನ್ನ ಹಣಕಾಸು ಕಂಪೆನಿಗಳು, ಸಾಲದ ಅವಧಿಯಲ್ಲಿ ಸಾಲಪಡೆದ ವ್ಯಕ್ತಿ ಮೃತಪಟ್ಟಲ್ಲಿ ಏನು ಮಾಡಬೇಕು ಎನ್ನುವ ಕುರಿತು ತಮ್ಮದೇ ಆದ ಷರತ್ತುಗಳನ್ನು ಹೊಂದಿದ್ದು, ಅವುಗಳನ್ನು ವೈಯಕ್ತಿಕ ಸಾಲ ದಾಖಲೆಯಲ್ಲಿ ವಿವರಿಸುತ್ತದೆ. ಸಾಧಾರಣವಾಗಿ, ಅಂತಹ ಪ್ರಕರಣಗಳಲ್ಲಿ, ಬಾಕಿ ಇರುವ ಸಾಲದ ಮೊತ್ತವನ್ನು ಕುಟುಂಬದ ಕಾನೂನುಬದ್ಧ ವಾರಸುದಾರ ಪಾವತಿಸಬೇಕಾಗುತ್ತದೆ. ಒಂದು ವೇಳೆ ಮೃತಪಟ್ಟ ಸಾಲಗಾರ ತನ್ನ ಅಂದರೆ ಆತನಆಕೆಯ ಹೆಸರಿನಲ್ಲಿ ಜೀವ ವಿಮೆ ಹೊಂದಿದ್ದಲ್ಲಿ, ಆಗ ವಿಮೆ ಕಂಪೆನಿಯು ವೈಯಕ್ತಿಕ ಸಾಲವನ್ನು ಪಾವತಿ ಮಾಡುತ್ತದೆ ಮತ್ತು ಸಾಲ ಪಡೆದ ವ್ಯಕ್ತಿಯ ಯಾವುದೇ ಕುಟುಂಬದ ಸದಸ್ಯನ ಮೇಲೆ ಹೊರೆ ಬೀಳುವುದಿಲ್ಲ.
ಸಾವಿಗೆ ಕಾರಣ ಯಾವುದೇ ಇರಲಿ, ವೈಯಕ್ತಿಕ ಸಾಲ ಹಿಂದಕ್ಕೆ ಪಡೆಯಲು ಸಂಪರ್ಕಿಸುವುದಕ್ಕಾಗಿ ಮೃತ ವ್ಯಕ್ತಿಯ ಕುಟುಂಬ ಅಥವಾ ಸಹ ಅರ್ಜಿದಾರ ಸರಿಯಾದ ವ್ಯಕ್ತಿ. ವೈಯಕ್ತಿಕ ಸಾಲ ಮರುಪಾವತಿ ಮಾಡಲು ಒಂದು ನಿಗದಿತ ಮರುಪಾವತಿ ಅವಧಿಯನ್ನು ಮಂಜೂರು ಮಾಡಲಾಗುತ್ತದೆ. ಒಂದುವೇಳೆ ಕಾನೂನು ವಾರಸುದಾರರು ಸಾಲವನ್ನು ಮರುಪಾವತಿ ಮಾಡದೇ ಇದ್ದರೆ, ವಾಹನದಂತಹ ಸಾಲಗಾರನ ಭೌತಿಕ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಮತ್ತು ವೈಯಕ್ತಿಕ ಸಾಲ ಮೊತ್ತವನ್ನು ಮರುಪಾವತಿ ಪಡೆದುಕೊಳ್ಳುವುದಕ್ಕಾಗಿ ಅದನ್ನು ಹರಾಜು ಹಕ್ಕು ಸಾಲದಾತರಿಗೆ ಇರುತ್ತದೆ.
ಮೃತ ವ್ಯಕ್ತಿಯ ಕಾನೂನು ವಾರಸುದಾರರು ಯಾರೂ ಇಲ್ಲದಿದ್ದರೆ, ಮತ್ತು ವೈಯಕ್ತಿಕ ಸಾಲವನ್ನು ಸಾಲಗಾರನ ಹೆಸರಿನಲ್ಲೇ ಪಡೆದುಕೊಂಡಿದ್ದರೆ, ಜವಾಬ್ದಾರಿಯನ್ನು ಹೊರುವ ವ್ಯಕ್ತಿ ಸಾಲ ನಿರ್ವಹಣೆ ಮಾಡುವ ವ್ಯಕ್ತಿಯಾಗಿರುತ್ತಾರೆ. ಇದರ ಅರ್ಥ ನಿರ್ವಹಣೆ ಮಾಡುವ ವ್ಯಕ್ತಿ ತಾನೇ ಹಣ ಮರುಪಾವತಿ ಮಾಡಬೇಕೆಂದಲ್ಲ, ಬದಲಿಗೆ ಸಾಲಪಡೆದ ವ್ಯಕ್ತಿಯ ಆಸ್ತಿಗಳನ್ನು ಸಾಲ ತೀರಿಸಲು ಉಪಯೋಗಿಸಬಹುದು ಎಂದರ್ಥ.