ಉನ್ನತ ಶಿಕ್ಷಣಕ್ಕೆ ಯಾವುದೇ ಗಡಿಗಳಿಲ್ಲ
ನೀವು ಭಾರತದಲ್ಲಿ ಹಾಗೂ ವಿದೇಶ ವಿಶ್ವವಿದ್ಯಾಲಯಗಳಲ್ಲಿ ಓದುವುದಕ್ಕಾಗಿ ಶಿಕ್ಷಣ ಸಾಲವನ್ನು ನೀವು ಎರವಲು ಪಡೆಯಬಹುದು. ಅನೇಕ ಹಣಕಾಸು ಸಂಸ್ಥೆಗಳು ವಿದೇಶಗಳಲ್ಲಿನ ಅಧ್ಯಯನಗಳಿಗಾಗಿ ಮೇಲಾಧಾರ-ಮುಕ್ತ ಶಿಕ್ಷಣ ಸಾಲಗಳನ್ನು ನೀಡುತ್ತವೆ.
I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಗುಣಮಟ್ಟದ ಶಿಕ್ಷಣ ಎನ್ನುವದು, ಯಶಸ್ವೀ ಜೀವನಕ್ಕೆ ಪ್ರಮುಖವಾಗಿದೆ. ಈಗಿನ ದಿನಗಳಲ್ಲಿ, ಶಿಕ್ಷಣದ ಖರ್ಚುವೆಚ್ಚ ವೇಗವಾಗಿ ಹೆಚ್ಚಾಗುತ್ತಿದೆ, ಮತ್ತು ಭಾರತ ಮತ್ತು ವಿದೇಶದಲ್ಲಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದ ಪ್ರವೇಶಕ್ಕಾಗಿ ತಾಯಿತಂದೆಯರು ಸೆಣಸಾಡುತ್ತಿದ್ದಾರೆ. ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಲು ಸಾಕಷ್ಟು ಹಣದ ಅಗತ್ಯವಿರುತ್ತದೆ. ಆದ್ದರಿಂದ ತಾಯಿತಂದೆಯರು ಹಣವನ್ನು ಸರಿಯಾಗಿ ನಿಗದಿತ ಠೇವಣಿಗಳಲ್ಲಿ, ರಿಕರಿಂಗ್ ಠೇವಣಿಗಳಲ್ಲಿ, ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ಧೀರ್ಘಾವಧಿ ಹೂಡಿಕೆಯಂತೆ ಇರಿಸುತ್ತಾರೆ. ನಿಮ್ಮ ಬಳಿ ಸಾಕಷ್ಟು ಉಳಿತಾಯ ಹಣ ಇಲ್ಲದಿದ್ದರೆ ಅಥವಾ ತುರ್ತು ಖರ್ಚುಗಳಿಗಾಗಿ ಹಣ ಉಳಿಸಲು ಬಯಸುತ್ತಿದ್ದರೆ, ಶೈಕ್ಷಣಿಕ ಮೈಲಿಗಲ್ಲುಗಳ ಸಾಧನೆಗಾಗಿ ಉತ್ತಮ ಆಯ್ಕೆಯೆಂದರೆ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ ತೆಗೆದುಕೊಳ್ಳುವುದು. ಶಿಕ್ಷಣಕ್ಕಾಗಿ ವೈಯಕ್ತಿಕ ಸಾಲ ಮಹತ್ವದ ಪಾತ್ರ ವಹಿಸುತ್ತದೆ; ಉನ್ನತ ಶಿಕ್ಷಣ ಅಥವಾ ಸೆಕೆಂಡರಿ ನಂತರದ ಶಿಕ್ಷಣ ಪಡೆಯುವ ಆಕಾಂಕ್ಷಿಗಳಿಗೆ ಶಿಕ್ಷಣ ಸಂಬಂಧ ಖರ್ಚುಗಳಿಗಾಗಿ ಹಣ ಎರವಲು ಪಡೆಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಟ್ಯೂಷನ್ ಶುಲ್ಕ, ಗ್ರಂಥಾಲಯ, ಮತ್ತು ವಸತಿನಿಲಯ ವೆಚ್ಚಗಳನ್ನು ಶಿಕ್ಷಣ ಸಾಲ ಒಳಗೊಳ್ಳುತ್ತದೆ. ಆದಾಗ್ಯೂ, ಆನ್ಲೈನ್ ಶಿಕ್ಷಣ ಸಾಲವು ಇತರ ವಿಧದ ಸಾಲಗಳಿಂದ ಭಿನ್ನವಾಗಿರುತ್ತದೆ. ವಿಧಿಸಲಾಗುವ ಬಡ್ಡಿದರ ಸಾಕಷ್ಟು ಕಡಿಮೆ ಇರುತ್ತದೆ ಮತ್ತು ವಿದ್ಯಾರ್ಥಿ ಆತನ/ಆಕೆಯ ವಿದ್ಯಾಭ್ಯಾಸದ ಅವಧಿ ಮುಗಿದಿರದಿದ್ದರೆ ಮರುಪಾವತಿ ಅವಧಿ ಮುಂದುವರಿಸಬಹುದಾದ ಆಯ್ಕೆ ಇರುತ್ತದೆ.
ಭಾರತದಲ್ಲಿನ ಅನೇಕ ಹಣಕಾಸು ಸಂಸ್ಥೆಗಳು ಶಿಕ್ಷಣ ಸಾಲಗಳನ್ನು ಬೆಂಬಲಿಸುತ್ತದೆ ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಪ್ರಯೋಜನವಾಗುತ್ತದೆ. ಶೈಕ್ಷಣಿಕ ಸಾಲ ಕಾರ್ಯಕ್ರಮದ ಅಡಿಯ ವ್ಯಾಪ್ತಿಯ ಕೋರ್ಸ್ ನ ವಿಧಕ್ಕೆ ಅನುಗುಣವಾಗಿ ಗರಿಷ್ಠ ಶಿಕ್ಷಣ ಸಾಲ ಮೊತ್ತ ವ್ಯತ್ಯಾಸವಾಗುತ್ತದೆ.
ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಇಲ್ಲದಂತೆ ಸುಲಭ ನೋಂದಣಿ ಮತ್ತು ಸಾಲ ವಿತರಣೆ ಪ್ರಕ್ರಿಯೆಯನ್ನು ಸಾಧ್ಯವಾಗಿಸುವ ಫ್ಲೆಕ್ಸಿಬಲ್ ಡಿಜಿಟಲ್ ವೇದಿಕೆಗಳ ಪೈಕಿ ಅರ್ಹತೆ ಪಡೆದ ವೈಯಕ್ತಿಕ ಸಾಲ ಆಪ್ ಹೀರೋಫಿನ್‌ಕಾರ್ಪ್ ಆಗಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ವಾರ್ಷಿಕ ಸಕಾಲದಲ್ಲಿ ಶೈಕ್ಷಣಿಕ ಪ್ರವೇಶಾತಿಗಾಗಿ ತ್ವರಿತ ಶಿಕ್ಷಣ ಸಾಲ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿ. ನಮೂದಿಸಲಾಗುವ ಮಾಹಿತಿ ಶೇಕಡಾ 100 ರಷ್ಟು ಸುರಕ್ಷಿತವಾಗಿರುತ್ತದೆ ಮತ್ತು ಶಿಕ್ಷಣ ಸಾಲ ಮಂಜೂರಾತಿ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿರುತ್ತದೆ.
ಹೀರೋಫಿನ್‌ಕಾರ್ಪ್ ಸಾಲ ಆಪ್ ಒಂದು ಆನ್ಲೈನ್ ಶಿಕ್ಷಣ ಸಾಲವನ್ನು 50,000 ದಿಂದ 1,5 ಲಕ್ಷದವರೆಗೆ ಒದಗಿಸುತ್ತದೆ ಇದು ವಿದ್ಯಾರ್ಥಿಗಳಿಗೆ ಅಥವಾ ಅಲ್ಪಾವಧಿ ಕೋರ್ಸ್ ಗಳು, ಪ್ರಮಾಣೀಕರಣ ಕೋರ್ಸ್ ಗಳು, ಅಥವಾ ವೃತ್ತಿಪರ ತರಬೇತಿ ಕಾರ್ಯಕ್ರಮಗಳಿಗಾಗಿ ನೋಡುವ ವೃತ್ತಿಪರರಿಗೆ ಸೂಕ್ತವಾಗಿರುತ್ತದೆ. ಉದಾಹರಣೆಗೆ, ಆನ್ಲೈನ್ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್, ಡಿಪ್ಲಮೊ ಇನ್ ಫೋಟೋಗ್ರಫಿ ಅಥವಾ ಮರ್ಚಂಡೈಸಿಂಗ್ ಇತ್ಯಾದಿ. ಶಿಕ್ಷಣ ಸಾಲ ಮೊತ್ತ ಕಡಿಮೆ ಇರುವುದರಿಂದ, ಇಎಂಐ ಗಳಲ್ಲಿ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದು ಸುಲಭವಾಗಿರುತ್ತದೆ. ಕೇವಲ ಕೆಲವೇ ಕ್ಲಿಕ್ ಗಳಲ್ಲಿ ಇದು ನಿಮ್ಮ ಎಲ್ಲಾ ತಕ್ಷಣದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವುದಲ್ಲದೆ, ವರ್ಷಕ್ಕೆ 11% ರಿಂದ ಪ್ರಾರಂಭವಾಗುವ ಕಡಿಮೆ ಬಡ್ಡಿ ದರದಲ್ಲಿ 6-24 ತಿಂಗಳ ನಡುವೆ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಸಹ ನೀಡುತ್ತದೆ. ಕೂಡಾ ನೀಡುತ್ತದೆ. ಸಾಲ ಪಡೆಯುವ ವ್ಯಕ್ತಿಯ ಆದಾಯ ಮತ್ತು ವೃತ್ತಿಗೆ ಅನುಗುಣವಾಗಿ ಶಿಕ್ಷಣ ಸಾಲಗಳ ಬಡ್ಡಿದರ ಕೂಡಾ ವ್ಯತ್ಯಾಸವಾಗಬಹುದು.
ಹೀರೋಫಿನ್‌ಕಾರ್ಪ್ ಶಿಕ್ಷಣ ಸಾಲ ಒಂದು ಭದ್ರತೆರಹಿತ ಮತ್ತು ಮೇಲಾಧಾರ ಮುಕ್ತ ಸಾಲವಾಗಿದ್ದು, ಸಾಲ ಮೊತ್ತಕ್ಕೆ ಪ್ರತಿಯಾಗಿ ಯಾವುದೇ ರೀತಿಯ ಭದ್ರತೆಯ ಅಗತ್ಯವಿರುವುದಿಲ್ಲ. ನೀವು ಪ್ರಯಾಣದಲ್ಲಿರಲಿ, ಕಚೇರಿಯಲ್ಲಿರಲಿ ಅಥವಾ ಮನೆಯಲ್ಲೇ ಇರಲಿ, ತತ್ ಕ್ಷಣ ಆಪ್ ನಿಮಗೆ ದಿನದ 24 ಗಂಟೆಯೂ ಲಭ್ಯವಿರುತ್ತದೆ.
ಶಿಕ್ಷಣಕ್ಕಾಗಿ ಒಂದು ವೈಯಕ್ತಿಕ ಸಾಲವು ಹೀರೋಫಿನ್‌ಕಾರ್ಪ್ ಇಎಂಐ ಕ್ಯಾಲುಕ್ಯುಲೇಟರ್ ನೊಂದಿಗೆ ಮತ್ತಷ್ಟು ಸುಲಭವಾಗುತ್ತದೆ ಏಕೆಂದರೆ ಇದು ನಿಮ್ಮ ಬಜೆಟ್ ಮತ್ತು ಅನುಕೂಲಕ್ಕೆ ತಕ್ಕಂತೆ ನಿಮ್ಮ ಮಾಸಿಕ ಇಎಂಐ ಹೊಂದಿಸಿಕೊಳ್ಳುವುದಕ್ಕೆ ಅನುಮತಿ ನೀಡುತ್ತದೆ.
ಆದ್ದರಿಂದ, ನಿಮ್ಮ ನೈಪುಣ್ಯಗಳನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ರಾಜಿ ಮಾಡಿಕೊಳ್ಳಬೇಡಿ. ಆಂಡ್ರಾಯ್ಡ್ ಪ್ಲೇ ಸ್ಟೋರ್ ನಿಂದ್ ಹೀರೋಫಿನ್‌ಕಾರ್ಪ್ ಡೌನ್ಲೋಡ್ ಮಾಡಿಕೊಳ್ಳಿ, ಮತ್ತು ಶಿಕ್ಷಣಕ್ಕಾಗಿ ಮತ್ತು ಉತ್ತಮ ಭವಿಷ್ಯದ ವಾಗ್ದಾನ ಮಾಡುತ್ತಾ, ನಿಮ್ಮ ಶೈಕ್ಷಣಿಕ ಗುರಿಗಳ ಪೂರೈಕೆಗಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳಿ.
ಭಾರತದಲ್ಲಿ ಸುಲಭ ಶಿಕ್ಷಣ ಸಾಲಗಳನ್ನು ಪಡೆದುಕೊಳ್ಳುವುದಕ್ಕಾಗಿ ಹಲವಾರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಯೋಜನೆಗಳನ್ನು ಪ್ರಾರಂಭಿಸಿವೆ. ಸಾಧಾರಣವಾಗಿ, ಶಿಕ್ಷಣ ಸಾಲಕ್ಕಾಗಿ ನೀಡಲಾಗುವ ರಿಯಾಯಿತಿಗಳು ಕೈಗೆಟಕುವಂತೆ ಮತ್ತು ಆಕರ್ಷಕವಾಗಿ ಇರುತ್ತವೆ. ಭಾರತ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳುವ ಗುರಿ ಹೊಂದಿರುವ ವಿದ್ಯಾರ್ಥಿನಿಯರಿಗಾಗಿ ಶಿಕ್ಷಣ ಸಾಲಗಳು ಬಹಳ ಕಡಿಮೆ ಬಡ್ಡಿ ದರಗಳನ್ನು ಹೊಂದಿರುತ್ತವೆ. ಅಷ್ಟೇ ಅಲ್ಲದೇ, ಶಿಕ್ಷಣ ಸಾಲಕ್ಕಾಗಿನ ಬಡ್ಡಿದರವು ಸಂಪೂರ್ಣ ಅವಧಿಯಲ್ಲಿ ಒಂದೇ ರೀತಿ ಇರುತ್ತದೆ.
ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಮತ್ತು ಜಾಲತಾಣಗಳ ಅಭಿವೃದ್ಧಿಯೊಂದಿಗೆ, ಸಾಲದ ಅಸಲು ಮೊತ್ತ, ಬಡ್ಡಿ ದರ, ಮತ್ತು ಅವಧಿಯನ್ನು ಪರಿಗಣಿಸುತ್ತಾ ಸಮಾನ ಮಾಸಿಕ ಕಂತಗಳನ್ನು ಲೆಕ್ಕಹಾಕುವ ಇಎಂಐ ಕ್ಯಾಲುಕ್ಯುಲೇಟ್ ಒಂದು ಪ್ರಮುಖ ವೈಶಿಷ್ಟ್ಯವಾಗಿದೆ. ಅನುಗುಣವಾಗಿ, ಶಿಕ್ಷಣ ಸಾಲ ಪಡೆಯುವುದಕ್ಕೆ ನೀವು ಮುಂದುವರಿಯಬಹುದೇ ಅಥವಾ ಮುಂದುವರಿಯಬಾರದೇ ಎನ್ನುವುದನ್ನು ನೀವು ನಿರ್ಧರಿಸಬಹುದು.
ಸಾರ್ವಜನಿಕ ಮತ್ತು ಖಾಸಗಿ ಹಣಕಾಸು ಸೇವೆಗಳಿಗೆ ಹೋಲಿಸಿದಲ್ಲಿ ಶಿಕ್ಷಣ ಸಾಲಗಳ ಮೇಲಿನ ಬಡ್ಡಿ ದರ ವ್ಯತ್ಯಾಸವಿರಬಹುದು. ಬಡ್ಡಿ ದರ ಮತ್ತು ರಿಯಾಯಿತಿಗಳನ್ನು ಆರ್ ಬಿ ಐ ನಿಯಮಗಳಿಗೆ ಅನುಗುಣವಾಗಿ ವಿಧಿಸಲಾಗುವುದು. ಖಾಸಗಿ ಬ್ಯಾಂಕುಗಳು ಮತ್ತು ಹಣಕಾಸು ಸೇವೆಗಳಿಗೆ ಹೋಲಿಸಿದಲ್ಲಿ, ಸಾರ್ವಜನಿಕ ಹಣಕಾಸು ಸಂಸ್ಥೆಗಳು ಶಿಕ್ಷಣ ಸಾಲಗಳ ಮೇಲೆ ವಿಧಿಸುವ ಬಡ್ಡಿ ದರ ಕಡಿಮೆ ಇರುತ್ತದೆ. ಅತಿ ಮುಖ್ಯವಾಗಿ, ಶಿಕ್ಷಣ ಸಾಲದಲ್ಲಿ ಬಡ್ಡಿ ದರ ಒಂದೇ ರೀತಿಯಾಗಿ ಉಳಿಯುತ್ತದೆ ಮತ್ತು ಹೆಚ್ಚು-ಕಡಿಮೆ ಆಗುವುದಿಲ್ಲ.
ಆನ್ಲೈನ್ ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ನೀವು ಯೋಚಿಸುವಾಗ, ಸಾಲ ನಿರಾಕರಣ ಅಥವಾ ವಿಳಂಬವಾಗಬಹುದಾದ ಸಾಧ್ಯತೆಗಳನ್ನೆಲ್ಲಾ ತೊಡೆದುಹಾಕುವುದಕ್ಕಾಗಿ ಶಿಕ್ಷಣ ಸಾಲ ಅರ್ಹತಾ ಮಾನದಂಡವನ್ನು ತಿಳಿದುಕೊಳ್ಳಬೇಕೆಂದು ಸಲಹೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳ ಬಗ್ಗೆ ತಿಳಿದುಕೊಳ್ಳಬೇಕು:
ಕಡ್ಡಾಯವಾಗಿ ಭಾರತೀಯ ಪೌರತ್ವ ಹೊಂದಿರಬೇಕು
ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು, ಹೆಚ್ ಎಸ್ ಸಿ ಮತ್ತು ಪದವಿ ಹಂತದಲ್ಲಿ ಕನಿಷ್ಠ ಶೇಕಡಾ 50 ರಷ್ಟು ಅಂಕವನ್ನು ಗಳಿಸಿರಬೇಕು *
ಭಾರತ ಅಥವಾ ವಿದೇಶದಲ್ಲಿ ಮೆರಿಟ್ ಆಧಾರದ ಮೇಲೆ ಪ್ರವೇಶಾತಿ ಪಡೆದುಕೊಂಡಿರಬೇಕು *
ವಿದ್ಯಾರ್ಥಿಯ ಪೋಷಕರ ಗ್ಯಾರಂಟರ್ ನ ನಿಯಮಿತ ಆದಾಯವನ್ನು ಆದಾಯ ಪುರಾವೆ ಪ್ರತಿಬಿಂಬಿಸಬೇಕು *
ಕೆವೈಸಿ ದಾಖಲೆಗಳು
ಹಿಂದಿನ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್
ಕಾಲೇಜ್ /ಸಂಸ್ಥೆಯ ಶುಲ್ಕ ವಿಧಾನದೊಂದಿಗಿರುವ ಪ್ರವೇಶಾತಿ ಪತ್ರದ ಪ್ರತಿ *
ಶೈಕ್ಷಣಿಕ ಪ್ರಮಾಣ ಪತ್ರಗಳು – ಅಂಕ ಪಟ್ಟಿಗಳು ಮತ್ತು ಉತ್ತೀರ್ಣ ಪ್ರಮಾಣ ಪತ್ರ *
*ಹೀರೋಫಿನ್‌ಕಾರ್ಪ್ ನೊಂದಿಗೆ ಸಾಲಗಳನ್ನು ಪಡೆದುಕೊಳ್ಳುವುದಕ್ಕೆ ದಾಖಲೆಗಳು/ವಿವರಗಳು ಅಗತ್ಯವಿಲ್ಲ.
ವೇತನದಾರರು ಮತ್ತು ಸ್ವಉದ್ಯೋಗಿಗಳು 21 ವರ್ಷದಿಂದ ವಿಶೇಷವಾಗಿ ಶಿಕ್ಷಣಕ್ಕಾಗಿ ಹೀರೋಫಿನ್‌ಕಾರ್ಪ್ ನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ನೀವು ಆನ್ಲೈನ್ ಶಿಕ್ಷಣ ವೈಯಕ್ತಿಕ ಸಾಲ ಪಡೆದುಕೊಳ್ಳುವಾಗ, ಸಾಲದಾತರು ಕನಿಷ್ಠ ಪ್ರಾಸೆಸಿಂಗ್ ಶುಲ್ಕವನ್ನು ವಿಧಿಸುತ್ತಾರೆ. ಇದು ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತದೆ. ಹೀರೋಫಿನ್‌ಕಾರ್ಪ್ ನಲ್ಲಿ, ವೈಯಕ್ತಿಕ ಸಾಲದ ಎಲ್ಲಾ ನಿಯಮಗಳು ಪಾರದರ್ಶಕವಾಗಿರುತ್ತವೆ. ಶಿಕ್ಷಣ ಸಾಲವಾಗಿರಲಿ ಅಥವಾ ಬೇರಾವುದೇ ವಿಧದ ಸಾಲವಾಗಿರಲಿ, ಕನಿಷ್ಠ ಪ್ರಾಸೆಸಿಂಗ್ ಶುಲ್ಕ @ 2.5% +GST (ಅನ್ವಯವಾಗುವಂತೆ) ಇರುತ್ತದೆ.
ಪದವಿ ಪಡೆದುಕೊಳ್ಳುವ ಮತ್ತು ಉನ್ನತ ಶಿಕ್ಷಣ ಪಡೆಯುವ ನಿಮ್ಮ ಆಸೆಯನ್ನು ಹಣಕಾಸು ಕೊರತೆ ಅಡಚಣೆಯಾಗುವುದಕ್ಕೆ ಬಿಡಬೇಡಿ. ಈಗಿನ ದಿನಗಳಲ್ಲಿ ಕನಿಷ್ಠ ದಾಖಲೆ ಸಲ್ಲಿಕೆಯೊಂದಿಗೆ ಶಿಕ್ಷಣಕ್ಕಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಸುಲಭ. ಉನ್ನತ ಶಿಕ್ಷಣ ಪಡೆದುಕೊಳ್ಳುವ ನಿಮ್ಮ ಆಕಾಂಕ್ಷೆಯನ್ನು ಪೂರೈಸಲು ಒಂದು ತತ್ ಕ್ಷಣ ಶಿಕ್ಷಣ ಸಾಲ ಸೌಲಭ್ಯವನ್ನು ಹೀರೋಫಿನ್‌ಕಾರ್ಪ್ ನಿಮಗಾಗಿ ತಂದಿದೆ. ಶಿಕ್ಷಣ ಸಾಲ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಆಂಡ್ರಾಯ್ಡ್ ನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ
ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಿ
ಸ್ಥಳ ವಿವರಗಳ ಕುರಿತ ಸ್ಪಷ್ಟತೆಗಾಗಿ ಪ್ರದೇಶದ ಪಿನ್ ಕೋಡ್ ನಮೂದಿಸಿ
ಕೆವೈಸಿ ವಿವರಗಳು ಹಾಗೂ ಇತರ ಸೂಚಿತ ದಾಖಲೆಗಳನ್ನು ಸೇರಿಸಿ ಮತ್ತು ರಿಯಲ್ ಟೈಮ್ ಸಾಲ ಅಂದಾಜು ಪಡೆದುಕೊಳ್ಳಿ
ವಹಿವಾಟಿನ ಅವಧಿಯಲ್ಲಿ ಸಾಲ ಮಂಜೂರಾತಿ ಪಡೆದುಕೊಳ್ಳಿ ಮತ್ತು ತತ್ ಕ್ಷಣ ವಿತರಣೆ ಪಡೆಯಿರಿ