ವೈದ್ಯಕೀಯ ಸಾಲ

ವೈದ್ಯಕೀಯ ತುರ್ತು ಸ್ಥಿತಿಯಲ್ಲಿ ಭಾರೀ ಖರ್ಚುವೆಚ್ಚಗಳು ಒಳಗೊಂಡಿದ್ದು, ಇದರಲ್ಲಿ ಚಿಕಿತ್ಸೆ, ಔಷಧಗಳು, ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸಾನಂತರ ಆರೈಕೆ ವಿಧಾನಗಳು ಸೇರಿರುತ್ತವೆ. ಈ ಸಮಸ್ಯೆ ಎದುರಿಸಲು ನಿವು ಸಿದ್ಧವಿಲ್ಲವೆಂದಾದರೆ, ತಕ್ಷಣವೇ ಹಣದ ಏರ್ಪಾಟು ಮಾಡುವುದಕ್ಕೆ ವೈದ್ಯಕೀಯ ತುರ್ತು ಸಾಲ ಎನ್ನುವುದು ಸೂಕ್ತವಾದ ಮೂಲವಾಗಿದೆ. ವೇತನದಾರರಿಗೆ ತುರ್ತು ಹಣವನ್ನು ಒಗ್ಗೂಡಿಸುವುದು ನಿಜಕ್ಕೂ ಕಷ್ಟದ ಕೆಲಸವೇ ಸರಿ. ವೈದ್ಯಕೀಯ ಸಾಲ ಕೈಯಲ್ಲಿದ್ದರೆ ವೈದ್ಯಕೀಯ ಬಿಲ್ ಗಳನ್ನು ಮತ್ತು ದೈನಂದಿನ ಖರ್ಚುಗಳನ್ನು ಸುಲಭವಾಗಿ ಸಮತೋಲನ ಮಾಡಬಹುದು. ತತ್ ಕ್ಷಣ ವೈದ್ಯಕೀಯ ಸಾಲ ನಿಜವಾಗಿಯೂ ಒಂದು ಜೀವರಕ್ಷಕವಾಗಿದ್ದು, ಕಡಿಮೆ ಸಮಯದಲ್ಲಿ ತ್ವರಿತ ಹಣ ಏರ್ಪಾಟು ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಬಾಕಿ ಇರುವ ವೈದ್ಯಕೀಯ ಬಿಲ್ ಗಳನ್ನು ಪಾವತಿಸುವುದಕ್ಕೆ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ತತ್ ಕ್ಷಣ ವೈದ್ಯಕೀಯ ಸಾಲ ಪಡೆದುಕೊಳ್ಳಿ. ವೈದ್ಯಕೀಯ ಸಾಲಗಳನ್ನು ಅನುಮೋದಿಸುವ ತತ್ ಕ್ಷಣ ಸಾಲ ಆಪ್ ಗಳು ಮತ್ತು ಜಾಲತಾಣಗಳನ್ನು ಕಂಡುಕೊಳ್ಳಲು ನಿಮ್ಮ ಸ್ಮಾರ್ಟ್ ಫೋನ್ ಸುಲಭ ಮೂಲವಾಗಿರುತ್ತದೆ. ಹೀರೋಫಿನ್‌ಕಾರ್ಪ್ ಒಂದು ವಿಶ್ವಾಸಾರ್ಹ ವೈಯಕ್ತಿಕ ಸಾಲ ಆಪ್ ಆಗಿದ್ದು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಿಮ್ಮ ಹಣಕಾಸು ನೆರವಿಗೆ ಬರುತ್ತದೆ. ಭಾರತದಲ್ಲಿ ಒಂದು ವಿಶ್ವಾಸಾರ್ಹ ಹಣಕಾಸು ಸಂಸ್ಥೆ ನಿಂದ ಚಾಲಿತ ಹೀರೋಫಿನ್‌ಕಾರ್ಪ್ ಮೂಲಕ ಕೇವಲ 24 ಗಂಟೆಗಳಲ್ಲಿ ನೀವು 1,50,000 ದವರೆಗೆ ಸಾಲ ಪಡೆದುಕೊಳ್ಳಬಹುದು.

ನಿಮ್ಮ ಉಳಿತಾಯಗಳನ್ನು ಮುರಿಯುವುದು, ಬಂಧುವಲ್ಲಿ ಸಾಲ ಕೇಳುವುದು, ಆಭರಣಗಳನ್ನು ಮಾರಾಟ ಮಾಡುವುದು, ವಾಹನ ಅಡಮಾನ ಇಡುವುದು ಇತ್ಯಾದಿಗಳು ಹಣಕಾಸು ಸಹಾಯ ಅಗತ್ಯವಿರುವಾಗ ಹಿಂದಕ್ಕೆ ಸರಿಯುತ್ತವೆ. ತುರ್ತು ಸಮಯಗಳಲ್ಲಿ ತತ್ ಕ್ಷಣ ವೈದ್ಯಕೀಯ ಸಾಲಗಳು ತ್ವರಿತವಾಗಿ ಕೆಲಸ ಮಾಡುತ್ತವೆ ಮತ್ತು ನೀವಿರುವ ಸ್ಥಳದಿಂದಲೇ ಅನುಕೂಲಕ್ಕೆ ತಕ್ಕಂತೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ವೈದ್ಯಕೀಯ ಸಾಲಗಳಿಗಾಗಿ ನೀವು ಏತಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಲು, ವೈಯಕ್ತಿಕ ಸಾಲ ಆಪ್ ವೈಶಿಷ್ಟ್ಯಗಳನ್ನು ಪರಿಗಣಿಸಿ.

logo
ಹೊಂದಿಕೊಳ್ಳುವ ಮರುಪಾವತಿ ಆಯ್ಕೆ
logo
ಕನಿಷ್ಠ ದಾಖಲೆ
logo
ತ್ವರಿತ ವಿತರಣೆ
Personal Loan EMI Calculator

Monthly EMI

₹ 0

Interest Payable

₹ 0

ವೈದ್ಯಕೀಯ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಕುಟುಂಬದ ಆಪ್ತ ಸದಸ್ಯರೊಬ್ಬರು ವೈದ್ಯಕೀಯ ಸ್ಥಿತಿಯೊಂದಿಗೆ ಸೆಣಸುತ್ತಿರುವುದನ್ನು ನೀವು ನೋಡಿದಾಗ, ಅವರಿಗೆ ಉಪಶಮನ ಒದಗಿಸುವ ವಿಚಾರ ಹೊರತುಪಡಿಸಿ ಬೇರಾವುದೇ ವಿಷಯ ನಿಮ್ಮ ಮನಸ್ಸಿಗೆ ಬರುವುದಿಲ್ಲ. ಉಳಿತಾಯಗಳು ಕಡಿಮೆ ಹಾಗೂ ವೈದ್ಯಕೀಯ ಖರ್ಚುವೆಚ್ಚಗಳು ಅಧಿಕವಾಗಿದ್ದರೂ ಕೂಡಾ, ವೈದ್ಯಕೀಯ ತುರ್ತು ಸ್ಥಿತಿಗಾಗಿ ಹಣ ಪಡೆದುಕೊಳ್ಳುವುದಕ್ಕೆ ತತ್ ಕ್ಷಣ ವೈದ್ಯಕೀಯ ಸಾಲ ಒಂದು ವಿಶ್ವಾಸಾರ್ಹ ಸೌಲಭ್ಯವಾಗಿದೆ. ಆನ್ಲೈನ್ ವೈದ್ಯಕೀಯ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಓದಿ:

t1.svg
ತ್ವರಿತ ಸಾಲ ಅನುಮೋದನೆಗಳು

ವೈದ್ಯಕೀಯ ತುರ್ತು ಸ್ಥಿತಿಗಳು ಯಾರಿಗಾಗೂ ಕಾಯುವುದಿಲ್ಲ. ತಕ್ಷಣವೇ ಹಣದ ಏರ್ಪಾಟು ಮಾಡಬೇಕಾಗುತ್ತದೆ. ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಕೇವಲ ಕೆಲವೇ ಗಂಟೆಗಳೊಳಗಾಗಿ ನಿಮ್ಮ ಖಾತೆಗೆ ನೇರವಾಗಿ ಸಾಲ ಮೊತ್ತದ ವಿತರಣೆಯನ್ನು ಮಂಜೂರು ಮಾಡುತ್ತದೆ ಮತ್ತು ಇದಕ್ಕೆ ವಿರುದ್ಧವಾಗಿ ಆಫ್ ಲೈನ್ ವೈಯಕ್ತಿಕ ಸಾಲದಲ್ಲಿ ಸಾಲ ಮೊತ್ತ ಅನುಮೋದನೆಗಾಗಿ ವಾರಗಳ ಕಾಲ ತೆಗೆದುಕೊಳ್ಳುತ್ತದೆ.

t2.svg
ಯಾವುದೇ ಭೌತಿಕ ದಾಖಲೆ ಸಲ್ಲಿಕೆಯಿಲ್ಲ

ತತ್ ಕ್ಷಣ ಸಾಲ ಆಪ್ ಮೂಲಕ ವೈದ್ಯಕೀಯ ಸಾಲ ಪಡೆದುಕೊಳ್ಳುವುದಕ್ಕಾಗಿನ ಗಣನೀಯ ಕಾರಣವೆಂದರೆ, ಅದರ ಕಾಗದರಹಿತ ದಾಖಲೆ ಸಲ್ಲಿಕೆ ಪ್ರಕ್ರಿಯೆಯಾಗಿದೆ ಮತ್ತು ಇದಕ್ಕೆ ಯಾವುದೇ ರೀತಿಯ ಕಾಗದ ಪತ್ರದ ಕೆಲಸವಿಲ್ಲ. ಇಚ್ಛೆಯ ತತ್ ಕ್ಷಣ ಸಾಲ ಆಪ್ ನಲ್ಲಿ ಕನಿಷ್ಠ ಅಗತ್ಯತೆಯ ದಾಖಲೆ ಸಲ್ಲಿಸಬೇಕು ಮತ್ತು ತತ್ ಕ್ಷಣ ಅನುಮೋದನೆಗಾಗಿ ಅದು ರಿಯಲ್ ಟೈಮ್ ನಲ್ಲಿ ಪ್ರಾಸೆಸ್ ಆಗುತ್ತದೆ.

t6.svg
ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆ

ಸಾಲ ಪಡೆಯುವ ವ್ಯಕ್ತಿಗಳು ಇಎಂಐ ಪಾವತಿಗಳ ದಿನಾಂಕ ಮತ್ತು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಯು ಸಾಲ ಮರುಪಾವತಿ ಅನುಕೂಲಕರವಾಗಿರುವ ಕಾರಣ ಹೆಚ್ಚಿನ ಸಾಲ ಪಡೆದುಕೊಳ್ಳುವುದಕ್ಕೆ ನಿಮ್ಮನ್ನು ಪ್ರೋತ್ಸಾಹಿಸುತ್ತದೆ.

t4.svg
ಸಾಲ ಇಎಂಐ ಕ್ಯಾಲುಕ್ಯುಲೇಟರ್

ಇಎಂಐ ಕ್ಯಾಲುಕ್ಯುಲೇಟರ್ ಎನ್ನುವುದು ತತ್ ಕ್ಷಣ ಸಾಲ ಆಪ್ ಗಳಲ್ಲಿ ಒಂದು ಇನ್ ಬ್ಯುಲ್ಟ್ ವೈಶಿಷ್ಟ್ಯವಾಗಿದೆ. ಸಾಲ ಮೊತ್ತ, ಅವಧಿ ಮತ್ತು ಬಡ್ಡಿ ದರವನ್ನು ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಧರಿಸುವ ಅವಕಾಶವನ್ನು ಇದು ನಿಮಗೆ ನೀಡುತ್ತದೆ.

ಹೀರೋಫಿನ್‌ಕಾರ್ಪ್ ಮೂಲಕ ಆನ್ಲೈನ್ ವೈದ್ಯಕೀಯ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ

ಮೆಡಿಕ್ಲೈಮ್ ಇಲ್ಲದಂತಹ ರೋಗಿಗಳು ಅಥವಾ ಅವರ ಕುಟುಂಬ ಸದಸ್ಯರು ಆನ್ಲೈನ್ ತತ್ ಕ್ಷಣ ವೈದ್ಯಕೀಯ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಹೀರೋಫಿನ್‌ಕಾರ್ಪ್ ಎನ್ನುವುದು ಒಂದು ತತ್ ಕ್ಷಣ ಸಾಲ ಆಪ್ ಆಗಿದ್ದು, ರೂ. 50,000 ದಿಂದ 1.5 ಲಕ್ಷದವರೆಗೆ ತುರ್ತು ವೈದ್ಯಕೀಯ ಸಾಲ ಪಡೆದುಕೊಳ್ಳುವುದಕ್ಕೆ ಸರಿಯಾದ ಮೂಲವಾಗಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಉಚಿತವಾಗಿ ಹೀರೋಫಿನ್‌ಕಾರ್ಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಆನ್ಲೈನ್ ವೈದ್ಯಕೀಯ ಸಾಲ ಪ್ರಕ್ರಿಯೆಯೊಂದಿಗೆ ಮುಂದೆ ಸಾಗಿ:

how-to-apply-for-doctor-loan (1).webp

  • 1

    ಆಧಾರ್ ಕಾರ್ಡ್ ಗೆ ಸಂಪರ್ಕಿಸಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಿ ಅಥವಾ ಪರಿಶೀಲನೆಗಾಗಿ ಒಟಿಪಿ ಪಡೆದುಕೊಳ್ಳಲು ಇಮೇಲ್ ಐಡಿ ನಮೂದಿಸಿ.

  • 2

    ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ ನಮೂದಿಸಿ.

     

  • 3

    ಸಾಲ ಇಎಂಐ ಕ್ಯಾಲುಕ್ಯುಲೇಟರ್ ಮೂಲಕ ಸಾಲ ಮೊತ್ತ ಮತ್ತು ಅವಧಿ ಆಯ್ಕೆ ಮಾಡಿ.

     

  • 4

    ಕೊನೆಯಲ್ಲಿ, ನಿಮ್ಮ ವ್ಯಕ್ತಿಗತ, ಹಣಕಾಸು ಮತ್ತು ವೃತ್ತಿಪರ ವಿವರಗಳನ್ನು ಡಿಜಿಟೈಸ್ಡ್ ಕೆವೈಸಿ ದಾಖಲೆಗಳ ಮೂಲಕ ತುಂಬಿ, ಇವುಗಳು ರಿಯಲ್ ಟೈಮ್ ನಲ್ಲಿ ಪರಿಶೀಲಿಸಲ್ಪಡುತ್ತವೆ.

     

  • 5

    ಪಟ್ಟಿ ಮಾಡಲಾದ ಬ್ಯಾಂಕ್ ಗಳ ಪೈಕಿ ನಿಮ್ಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ ಮತ್ತು ಯಾವುದಕ್ಕೆ ಸಾಲ ಮೊತ್ತ ವಿತರಣೆಯಾಗಬೇಕೆಂದು ನೀವು ಬಯಸುತ್ತೀರೋ ಅದರಲ್ಲಿ ವಿವರಗಳನ್ನು ನಮೂದಿಸಿ.

ವೈದ್ಯಕೀಯ ತುರ್ತು ಸ್ಥಿತಿ ಯಾರಿಗಾಗೂ ಕಾಯುವುದಿಲ್ಲ. ನಿಮ್ಮ ಪ್ರೀತಿಪಾತ್ರರ ವೈದ್ಯಕೀಯ ಚಿಕಿತ್ಸೆಗೆ ಬೆಂಬಲಿಸು ನೀವು ಸಾಧ್ಯವಾದಷ್ಟು ಶೀಘ್ರವಾಗಿ ಹಣ ಏರ್ಪಾಟು ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ವೈದ್ಯಕೀಯ ಸಾಲ ವಿಳಂಬವಾಗದಿರುವುದನ್ನು ಖಾತರಿ ಪಡಿಸಿಕೊಳ್ಳುವುದಕ್ಕಾಗಿ, ಸಾಲ ಪಡೆಯುವವರಿಗೆ ಆನ್ಲೈನ್ ವೈದ್ಯಕೀಯ ಸಾಲಕ್ಕಾಗಿ ಅಗತ್ಯವಿರುವ ಅರ್ಹತಾ ಮಾನದಂಡ ಹಾಗೂ ದಾಖಲೆಗಳ ಕುರಿತು ಚೆನ್ನಾಗಿ ತಿಳಿಯಪಡಿಸಬೇಕಾಗುತ್ತದೆ:
1

ವಯಸ್ಸಿನ ಮಾನದಂಡ: ಅರ್ಜಿದಾರರ ವಯಸ್ಸು 21 ರಿಂದ 58 ವರ್ಷದೊಳಗಿರಬೇಕು.

 

2

ವೇತನದಾರರಿಗಾಗಿ ಕನಿಷ್ಠ ಮಾಸಿಕ ಆದಾಯ: ಅರ್ಜಿದಾರರು ಮಾಸಿಕ ಕನಿಷ್ಠ ರೂ. 15,000 ಮೊತ್ತವನ್ನು ಗಳಿಸಬೇಕು.

 

3

ಸ್ವ ಉದ್ಯೋಗಿಗಳಿಗಾಗಿ ಕನಿಷ್ಠ ಮಾಸಿಕ ಆದಾಯ: ಕನಿಷ್ಠ ಗಳಿಕೆ ಮಾಸಿಕ ರೂ. 15,000 ಆಗಿರಬೇಕು ಮತ್ತು ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯ.

 

4

ಆದಾಯ ಪುರಾವೆ: ವೇತನದಾರರಿಗೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ವೈಯಕ್ತಿಕ ಖಾತೆ

5

ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಬೇಕಾಗುವ ಮೊದಲ ದಾಖಲೆಯೆಂದರೆ ಅದು ಆಧಾರ್ ಕಾರ್ಡ್.

 

6

ಆಧಾರ್ ಕಾರ್ಡ್ ಇಲ್ಲದೇ ಇದ್ದರೆ, ನೀವು ನಿಮ್ಮ ಪ್ಯಾನ್ ಕಾರ್ಡ್/ ಚಾಲನಾ ಪರವಾನಗಿ ಒದಗಿಸಬಹುದು.

 

7

ಇತರ ಪ್ರಮುಖ ದಾಖಲೆಗಳಲ್ಲಿ, ನಿಮ್ಮ ವೃತ್ತಿಪರ ಮತ್ತು ಹಣಕಾಸು ವಿವರಗಳು ಇದರಲ್ಲಿ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಒಳಗೊಂಡಿರಬೇಕು.

8

ಹಣಕಾಸು ಸಂಸ್ಥೆ ಸಲಹೆ ಮಾಡಿರುವ ಪ್ರಕಾರ ಅಂಗೀಕೃತ ಬ್ಯಾಂಕ್ ಗಳ ಪೈಕಿ ಯಾವುದಾದರೊಂದರಲ್ಲಿ ನಿಮ್ಮ ಖಾತೆ ಇರಬೇಕು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವೈದ್ಯಕೀಯ ಸಾಲವನ್ನು ವೇಗವಾಗಿ ಪಡೆದುಕೊಳ್ಳುವ ಮೂಲವೆಂದರೆ ಅದು ಆನ್ಲೈನ್ ತತ್ ಕ್ಷಣ ಸಾಲ ಆಪ್ ಗಳು. ಹೀರೋಫಿನ್‌ಕಾರ್ಪ್ ಎನ್ನುವುದು ಒಂದು ವಿಶ್ವಾಸಾರ್ಹ ವೈಯಕ್ತಿಕ ಆಪ್ ಆಗಿದ್ದು ವೈದ್ಯಕೀಯ ತುರ್ತು ಸ್ಥಿತಿಗಳಲ್ಲಿ ನಿಮಗೆ ಹಣಕಾಸು ಬೆಂಬಲವಾಗಬಹುದು. ಹೀರೋ ಫಿನ್ ಕ್ರಾಪ್ ನಿಂದ ಚಾಲಿತವಾದ ಹೀರೋಫಿನ್‌ಕಾರ್ಪ್ ಆಪ್ ಮುಖಾಂತರ 24 ಗಂಟೆಗಳೊಳಗಾಗಿ 1,50,000 ರೂಪಾಯಿ ವೈದ್ಯಕೀಯ ಸಾಲ ಪಡೆದುಕೊಳ್ಳಬಹುದು.
ಹೌದು, ದುಬಾರಿ ವೈದ್ಯಕೀಯ ಬಿಲ್ ಗಳು ಮತ್ತು ಇತರ ಸಂಬಂಧಿತ ಖರ್ಚುವೆಚ್ಚಗಳನ್ನು ನಿರ್ವಹಣೆ ಮಾಡುವುದಕ್ಕಾಗಿ ನೀವು ವೈದ್ಯಕೀಯ ತುರ್ತು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ವೈದ್ಯಕೀಯ ಸಾಲಗಳಿಗಾಗಿ ಅರ್ಜಿ ಸಲ್ಲಿಸುವ ಸಾಲಪಡೆಯುವ ವ್ಯಕ್ತಿಗಳು ಸಾಲದಾತರ ಅರ್ಹತಾ ಮಾನದಂಡಕ್ಕೆ ಮತ್ತು ಕಡ್ಡಾಯ ದಾಖಲೆ ಸಲ್ಲಿಕೆಯ ನಿಯಮಗಳನ್ನು ಅನುಸರಿಸಬೇಕು.
ಕ್ರೆಡಿಟ್ ಸ್ಕೋರ್ ಎನ್ನುವುದು ಸಾಲಗಾರರ ಹಣಕಾಸು ಇತಿಹಾಸ ಮತ್ತು ಸಾಲ ಮರುಪಾವತಿಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ವೈದ್ಯಕೀಯ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಾಲ ಪಡೆಯುವವರು 900 ಕ್ಕೆ ಸಮೀಪದ ಕ್ರೆಡಿಟ್ ಸ್ಕೋರ್ ಹೊಂದಿರಬೇಕು. 24 ಗಂಟೆಗಳಲ್ಲಿ ಸಾಲ ಅನುಮೋದನೆಯ ಸಾಧ್ಯತೆಗಳನ್ನು ಇದು ಹೆಚ್ಚಿಸುತ್ತದೆ.
ನೀವು ಆನ್ಲೈನ್ ತತ್ ಕ್ಷಣ ಸಾಲ ಆಪ್ ಗಳ ಮೂಲಕ ನೀವು ವೈದ್ಯಕೀಯ ತುರ್ತು ಸಾಲವನ್ನು ಪಡೆದುಕೊಳ್ಳಬಹುದು. ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುವ ಅತ್ಯಂತ ತ್ವರಿತ ಮೂಲ ಇದಾಗಿದೆ. ನೀವು ಆಸ್ಪತ್ರೆಯಲ್ಲಿದ್ದರೂ ಕೂಡಾ, ನೀವು ಆನ್ಲೈನ್ ವೈಯಕ್ತಿಕ ಸಾಲ ಆಪ್ ಮೂಲಕ ಒಂದು ತತ್ ಕ್ಷಣ ವೈದ್ಯಕೀಯ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಸಾಲದಾತರಿಂದ ಸಲಹೆ ಮಾಡಲಾಗಿರುವ ಅರ್ಹತಾ ಮಾನದಂಡದ ಸೆಟ್ ನೊಂದಿಗೆ ನೀವು ವೈದ್ಯಕೀಯ ಸಾಲಕ್ಕೆ ಅರ್ಹತೆ ಪಡೆಯಬಹುದು. ವೈದ್ಯಕೀಯ ಸಾಲಗಳೊಂದಿಗೆ ವಿಳಂಬ ಪಾವತಿ ಅಥವಾ ಯಾವುದೇ ವಿಧದ ವಂಚನೆಯ ಅಪಾಯವನ್ನು ತೆಗೆದುಕೊಳ್ಳಬಾರದೆಂಬ ಸರಳ ಕಾರಣಕ್ಕಾಗಿ ಹಣಕಾಸು ಸಂಸ್ಥೆಗಳು ಅರ್ಹತಾ ಮಾನದಂಡವನ್ನು ಕಡ್ಡಾಯಗೊಳಿಸಿವೆ.
ವೈದ್ಯಕೀಯ ಸಾಲ ಎನ್ನುವುದು ಒಂದು ರೀತಿಯ ವೈಯಕ್ತಿಕ ಸಾಲವಾಗಿದ್ದು, ವೈದ್ಯಕೀಯ ಪ್ರಕ್ರಿಯೆಗಳಿಗೆ ಮತ್ತು ಚಿಕಿತ್ಸೆಗಳಿಗೆ ತುರ್ತು ಹಣ ಒದಗಿಸುವುದಕ್ಕೆ ಸಹಾಯ ಮಾಡುತ್ತದೆ.
ವೈದ್ಯಕೀಯ ಸಾಲಕ್ಕಾಗಿ ಗುರುತು ಪುರಾವೆ ಮತ್ತು ಆದಾಯ ದಾಖಲೆಗಳು ಕಡ್ಡಾಯ ಹಾಗೆಯೇ ಆಧಾರ್ ಕಾರ್ಡ್, ವೇತನ ಸ್ಲಿಪ್ ಗಳು ಮತ್ತು ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಕೂಡಾ ಕಡ್ಡಾಯವಾಗಿರುತ್ತದೆ.
ವೈದ್ಯಕೀಯ ಸಾಲಕ್ಕಾಗಿ ಗುರುತು ಪುರಾವೆ ಮತ್ತು ಆದಾಯ ದಾಖಲೆಗಳು ಕಡ್ಡಾಯ ಹಾಗೆಯೇ ಆಧಾರ್ ಕಾರ್ಡ್, ವೇತನ ಸ್ಲಿಪ್ ಗಳು ಮತ್ತು ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಕೂಡಾ ಕಡ್ಡಾಯವಾಗಿರುತ್ತದೆ.
ಸಾಲ ಪಡೆಯುವ ವ್ಯಕ್ತಿಗಳು ಆನ್ಲೈನ್ ಸಾಲ ಆಪ್ ಗಳು, ಗ್ರಾಹಕ ಸಹಾಯದ ಮೂಲಕ ಅಥವಾ ಖುದ್ದಾಗಿ ಶಾಖೆಗೆ ಭೇಟಿ ನೀಡುವ ಮೂಲಕ ವೈದ್ಯಕೀಯ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.