ತ್ವರಿತ ಅನುಮೋದನೆ
ಆನ್ಲೈನ್ ತತ್ ಕ್ಷಣ ಸಾಲ ಆಪ್ ಗಳು 24 ಗಂಟೆಗಳ ಅವಧಿಯೊಳಗಾಗಿ ತ್ವರಿತ ಸಾಲ ಅನುಮೋದನೆಯನ್ನು ಒದಗಿಸುತ್ತವೆ. ಇದೊಂದು ತ್ವರಿತ, ಭದ್ರತೆ ರಹಿತ ಪ್ರಕ್ರಿಯೆಯಾಗಿದ್ದು ಯಾವುದೇ ಭೌತಿಕ ದಾಖಲೆಗಳ ಅಗತ್ಯ ಇರುವುದಿಲ್ಲ.
ಮಹಿಳೆಯರಿಗಾಗಿ ಸಾಲ ಅರ್ಹತಾ ಮಾನದಂಡ ಸಾಲದಾತರಿಂದ ಸಾಲದಾತರಿಗೆ ವ್ಯತ್ಯಾಸವಾಗುತ್ತದೆ. ಸಾಲದ ಉದ್ದೇಶ ಹಾಗೂ ಸಾಲಗಾರರ ವೃತ್ತಿ ಮತ್ತು ಸಾಲದ ಉದ್ದೇಶಕ್ಕೆ ಅನುಗುಣವಾಗಿ ವಿವಿಧ ಸಾಲಗಳು ವಿವಿಧ ಅರ್ಹತಾ ಮಾನದಂಡವನ್ನು ಹೊಂದಿರುತ್ತವೆ:
ಭಾರತದ ನಿವಾಸಿಯಾಗಿರಬೇಕು
21 ರಿಂದ 58 ವರ್ಷ ವಯಸ್ಸಿನ ನಡುವೆ ಇರಬೇಕು.
ಕನಿಷ್ಠ ಮಾಸಿಕ ಆದಾಯ 15,000 ರೂಪಾಯಿ ಆಗಿರಬೇಕು
ವೇತನದಾರ ಮಹಿಳೆಯರಿಗೆ ಆರು ತಿಂಗಳುಗಳ ವೇತನ ಪುರಾವೆ ಅಥವಾ ಐಟಿಆರ್ ಅಗತ್ಯವಿರುತ್ತದೆ
ಆದಾಯ ಪುರಾವೆ ಅನುಪಸ್ಥಿತಿಯಲ್ಲಿ, ವೈಯಕ್ತಿಕ ಸಾಲ ಅನುಮೋದನೆಗಾಗಿ ಮಹಿಳೆಯರು ಗ್ಯಾರಂಟರ್ ನಿಯೋಜಿಸಬಹುದು ಅಥವಾ ಫಾರಂ 16 ನೀಡಬಹುದು
ಸ್ವ ಉದ್ಯೋಗಿ ಮಹಿಳೆಗಾಗಿ, ವ್ಯಾಪಾರ ಸ್ಥಿರತೆ ಮತ್ತು 6 ತಿಂಗಳುಗಳ ಬ್ಯಾಂಕ್ ವಹಿವಾಟು ಕಡ್ಡಾಯ
ಸಾಲ ಅರ್ಜಿ ಡಿಜಿಟಲೈಸ್ ಆದರೆ ಅಥವಾ ಆನ್ಲೈನ್ ಸಾಲ ಆಪ್ ಮೂಲಕ ನಡೆದರೆ, ಅಗತ್ಯ ದಾಖಲೆಗಳು ಕನಿಷ್ಠವಾಗಿರುತ್ತವೆ. ಆದ್ದರಿಂದ ತಮ್ಮ ಗುರಿಗಳ ಈಡೇರಿಕೆಗೆ ಆಕಾಂಕ್ಷಿಯಾದವರು ವೈಯಕ್ತಿಕ ಸಾಲ ಬಳಕೆಯ ಉದ್ದೇಶ ಹೊಂದಿರುವವರು ಸಾಲ ಪಡೆದುಕೊಳ್ಳಲು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು. :
ಆದಾಯ ಪುರಾವೆ – ಆಧಾರ್ ಕಾರ್ಡ್/ಸ್ಮಾರ್ಟ್ ಕಾರ್ಡ್ ಎನೇಬಲ್ಡ್ ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್
ವಿಳಾಸ ಪುರಾವೆ – ಪಾಸ್ ಪೋರ್ಟ್/ಪಡಿತರ ಚೀಟಿ/ಮತದಾರ ಗುರುತಿನ ಚೀಟಿ /ಆಧಾರ್ ಕಾರ್ಡ್
ಉದ್ಯೋಗ ವಿವರಗಳು (ವೇತನದಾರ ಮಹಿಳೆಯರಾಗಿದ್ದರೆ) – ಕಂಪೆನಿ ವಿಳಾಸ, ವೃತ್ತಿ, ಉದ್ಯೋಗದಾತರ ಹೆಸರು, ವೇತನ ವಿವರಗಳಂತಹ ಉದ್ಯೋಗ ಸ್ಥಿರತೆ
ವ್ಯಾಪಾರ ವಿವರಗಳು (ಸ್ವ ಉದ್ಯೋಗಿ ಮಹಿಳೆಯರಾಗಿದ್ದರೆ) – ಕಂಪೆನಿ ಹೆಸರು, ನೋಂದಣಿ ಪ್ರಮಾಣಪತ್ರ, ಮತ್ತು ಸಾಲ ಪಡೆದುಕೊಳ್ಳುವುದಕ್ಕೆ 6 ತಿಂಗಳುಗಳ ವ್ಯಾಪಾರ ಸ್ಥಿರತೆ ಪುರಾವೆ ಕಡ್ಡಾಯವಾಗಿರುತ್ತದೆ.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ವೈಯಕ್ತಿಕ ಸಾಲ ಎನ್ನುವುದು ವರದಾನದಂತೆ ಕೆಲಸ ಮಾಡುತ್ತದೆ. ತುರ್ತು ಸ್ಥಿತಿಯ ವೇಳೆ ಇನ್ಸ್ ಟೆಂಟ್ ಸಾಲ ಆಪ್ ಮೂಲಕ ಒಂದು ಆನ್ಲೈನ್ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಮಹಿಳೆ ಭರವಸೆಯ ಕಿರಣವನ್ನು ಕಾಣುತ್ತಾಳೆ. ಪ್ರತಿಯೊಂದು ಆಪ್ ಕೂಡಾ ವಿಭಿನ್ನಯವಾಗಿ ವಿನ್ಯಾಸಗೊಂಡಿದೆ ಮತ್ತು ಆದರೆ ಕೆಲವು ಮೂಲ ವಿಷಯಗಳು ಇಂತಿವೆ :
ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪ್ರದೇಶ ಪಿನ್ ಕೋಡ್ ನಮೂದಿಸಿ
ನಿಮ್ಮ ಮೊಬೈಲ್ ಫೋನ್ ಗೆ ಜೋಡಿಸಲಾಗಿರುವ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಗೆ ಜೋಡಣೆಯಾಗಿಲ್ಲದೇ ಇದ್ದರೆ ನೀವು ನಿಮ್ಮ ಕೆವೈಸಿ ಪೂರ್ಣಗೊಳಿಸಲು ನಿಮ್ಮ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ ಉಪಯೋಗಿಸಬಹುದು
ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ನಿಮ್ಮ ಇಎಂಐ ಅನ್ನು ಯೋಜಿಸುವುದಕ್ಕಾಗಿ ನಿಮ್ಮ ಸಾಲ ಮೊತ್ತ, ಮರುಪಾವತಿ ಅವಧಿ ಮತ್ತು ಬಡ್ಡಿ ಶೇಕಡಾವಾರನ್ನು ಕಸ್ಟಮೈಸ್ ಮಾಡಿಕೊಳ್ಳಿ
ನಿಮ್ಮ ವ್ಯಕ್ತಿಗತ, ವೃತ್ತಿಪರ ಮತ್ತು ಹಣಕಾಸು ವಿವರಗಳನ್ನು ನಮೂದಿಸಿ
ಸಾಲ ಅರ್ಜಿಗಾಗಿನ ಉದ್ದೇಶವನ್ನು ಆಯ್ಕೆ ಮಾಡಿ
ಅರ್ಜಿ ಸಲ್ಲಿಕೆಯಾದ ಮತ್ತು ಪರಿಶೀಲನೆಯಾದ ನಂತರ, ನಿಮ್ಮಿಂದ ಸೂಚಿಸಲ್ಪಟ್ಟಿರುವ ಬ್ಯಾಂಕ್ ಖಾಥೆಗೆ ಸಾಲ ಮೊತ್ತ ನೇರವಾಗಿ ವರ್ಗಾವಣೆ ಮಾಡಲ್ಪಡುತ್ತದೆ
ಅಂತಿಮವಾಗಿ ಹೇಳಬೇಕೆಂದರೆ, ಆನ್ಲೈನ್ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಮಹಿಳೆಯರಿಗೆ ವರದಾನದಂತೆ ಕೆಲಸ ಮಾಡುತ್ತವೆ. ಇದು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ಮಟ್ಟವನ್ನು ಏರಿಸಿದೆ, ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅವರನ್ನು ಪ್ರೋತ್ಸಾಹಿಸಿದೆ.