H.Ai Bot Logo
H.Ai Bot
Powered by GPT-4
Terms of Service

I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.

ಸರ್ಕಾರಿ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲದ ವೈಶಿಷ್ಟ್ಯಗಳು ಹಾಗೂ ಪ್ರಯೋಜನಗಳು

ಸರ್ಕಾರಿ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು ಇತರ ಸಾಲಪಡೆಯುವವರಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಸರ್ಕಾರಿ ಉದ್ಯೋಗಿಗಳು ಕೂಡಾ ತಮ್ಮ ಮಾಸಿಕ ವೇತನ ಹಾಗೂ ಸಕಾರಾತ್ಮಕ ಸಿಐಬಿಐಎಲ್ ಸ್ಕೋರ್ ಆಧಾರದ ಮೇಲೆ ವೈಯಕ್ತಿಕ ಸಾಲ ಅನುಮೋದನೆ ಪಡೆದುಕೊಳ್ಳುತ್ತಾರೆ.

t1.svg
ಸರಳ ಸೈನ್ ಅಪ್ ಹಾಗೂ ಲಾಗಿನ್

ಕೇವಲ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸ ನಮೂದಿಸುವ ಮೂಲಕ ಸರ್ಕಾರಿ ಉದ್ಯೋಗಿಯು ಹೀರೋಫಿನ್‌ಕಾರ್ಪ್ ಸಾಲ ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

t2.svg
ಗೊಂದಲ ಮುಕ್ತ ದಾಖಲೆ ಸಲ್ಲಿಕೆ

ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಅಗತ್ಯವಿಲ್ಲ. ಭೌತಿಕ ಪರಿಶೀಲನೆಗೆ ಅಗತ್ಯವಾದ ಸಾಕಷ್ಟು ಸಮಯವನ್ನು ಕಾಗದ ರಹಿತ ದಾಖಲೆ ಸಲ್ಲಿಕೆ ಪ್ರಕ್ರಿಯೆ ಉಳಿತಾಯ ಮಾಡುತ್ತದೆ.

t3.svg
ಕಡಿಮೆ ಬಡ್ಡಿ ದರ

ನೀವು ಸರ್ಕಾರಿ ಉದ್ಯೋಗಿಯಾಗಿದ್ದರೆ ಹಾಗೂ ಸಾಲಗಳ ಸಕಾಲಿಕ ಮರುಪಾವತಿಯ ಉತ್ತಮ ಕ್ರೆಡಿಟ್ ಸ್ಕೋರ್ ಉಳಿಸಿಕೊಂಡಿದ್ದರೆ, ಸಾಲದಾತರ ನಿಯಮಾನುಸಾರ ಸಾಲ ಮೊತ್ತದ ಮೇಲೆ ಕಡಿಮೆ ಬಡ್ಡಿ ದರ ವಿಧಿಸಲ್ಪಡಬಹುದು. ಬಡ್ಡಿ ದರ ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು

t4.svg
ನಿಮ್ಮ ಸಾಲ ಮೊತ್ತ ಮತ್ತು ಇಎಂಐ ಕಸ್ಟಮೈಸ್ ಮಾಡಿಕೊಳ್ಳಿ.

ನಿಮ್ಮ ಸಾಲ ಮೊತ್ತ, ಅವಧಿ ಹಾಗೂ ಇಎಂಐ ಕಸ್ಟಮೈಸ್ ಮಾಡಿಕೊಳ್ಳುವುದಕ್ಕೆ ಸಾಲ ಇಎಂಐ ಕ್ಯಾಲುಕ್ಯುಲೇಟರ್ ನಿಮಗೆ ಅವಕಾಶ ಮಾಡಿಕೊಡುತ್ತದೆ ಮತ್ತು ನಿಮ್ಮ ಅಮೂಲ್ಯ ಸಮಯವನ್ನು ಉಳಿತಾಯ ಮಾಡುತ್ತದೆ. ಸಾಲ ಇಎಂಐ ಕ್ಯಾಲುಕ್ಯುಲೇಟರ್ ಸಹಾಯದಿಂದ ನೀವು ಮರುಪಾವತಿಸಬಹುದಾದ ಇಎಂಐ ಮೊತ್ತದ ನಿಖರ ಅಂದಾಜನ್ನು ನೀವು ಪಡೆದುಕೊಳ್ಳಬಹುದು.

collateral-free.svg
ತತ್ ಕ್ಷಣ ಅನುಮೋದನೆ

ಅರ್ಜಿ ಸಲ್ಲಿಕೆ ಮತ್ತು ಸೂಕ್ತ ಪರಿಶೀಲನೆಯ ನಂತರ ಸಾಲ ಮೊತ್ತವು 24 ಗಂಟೆಗಳೊಳಗಾಗಿ ಅನುಮೋದಿಸಲ್ಪಡುತ್ತದೆ ಮತ್ತು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.

t5.svg
ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆ

ಸಾಲ ಮೊತ್ತ ಮರುಪಾವತಿ ಮಾಡುವ ನಿಮ್ಮ ಅನುಕೂಲ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕನಿಷ್ಠ 6 ತಿಂಗಳುಗಳಿನಿಂದ ಗರಿಷ್ಠ 24 ತಿಂಗಳುಗಳ ನಡುವೆ ಯಾವುದೇ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ.

collateral-free.svg
ಸುರಕ್ಷಿತ ಮತ್ತು ಸುಭದ್ರ ಸಾಲ ಆಪ್

ನಮೂದಿಸಲಾದ ವ್ಯಕ್ತಿಗತ ವಿವರಗಳು ಹಾಗೂ ಸಲ್ಲಿಸಲಾದ ದಾಖಲೆಗಳ ಶೇಕಡಾ 100 ರಷ್ಟು ಸುರಕ್ಷತೆ ಹಾಗೂ ಗೌಪ್ಯತೆಯನ್ನು ಹೀರೋಫಿನ್‌ಕಾರ್ಪ್ ಖಚಿತಪಡಿಸುತ್ತದೆ.

ಸರ್ಕಾರಿ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲದ ಅರ್ಹತಾ ಮಾನದಂಡ

ಸರ್ಕಾರಿ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲವು ಕೆಲವು ಅರ್ಹತಾ ಮಾನದಂಡವನ್ನು ಹೊಂದಿದ್ದು, ಅದೇ ದಿನ ಸಾಲ ಅನುಮೋದನೆ ಸಾಧ್ಯತೆಗಳನ್ನು ಇದು ಹೆಚ್ಚಿಸುತ್ತದೆ. ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲ ಆಪ್ ಸರ್ಕಾರಿ ಉದ್ಯೋಗಿಗಳಿಗಾಗಿ ಸರಳ ಅರ್ಹತಾ ಮಾನದಂಡವನ್ನು ಅನುಸರಿಸುತ್ತದೆ.

01

ನೀವು ಭಾರತೀಯ ಪೌರರಾಗಿರಬೇಕು.

02

ನಿಮ್ಮ ವಯಸ್ಸು 21-58 ವರ್ಷಗಳ ನಡುವೆ ಇರಬೇಕು.

03

ಕನಿಷ್ಠ ಕೆಲಸ ಅನುಭವ 6 ತಿಂಗಳು

04

ನಿಮ್ಮ ಕನಿಷ್ಠ ಮಾಸಿಕ ಆದಾಯ 15000 ರೂಪಾಯಿ ಆಗಿರಬೇಕು.

ಹೀರೋಫಿನ್‌ಕಾರ್ಪ್ ಮೂಲಕ ಸರ್ಕಾರಿ ಉದ್ಯೋಗಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಅಗತ್ಯ ದಾಖಲೆಗಳಲ್ಲಿ ಈ ಕೆಳಗಿನವುಗಳು ಒಳಗೊಂಡಿರುತ್ತವೆ:

05

ಗುರುತು ಪುರಾವೆ – ಆಧಾರ್ ಕಾರ್ಡ್/ಚಾಲನಾ ಪರವಾನಗಿ/ಮತದಾರ ಗುರುತಿನ ಚೀಟಿ

06

ವಿಳಾಸ ಪುರಾವೆ – ವಿದ್ಯುಚ್ಛಕ್ತಿ ಬಿಲ್/ಪಾಸ್ ಪೋರ್ಟ್/ಆಧಾರ್ ಕಾರ್ಡ್.

07

ಹಣಕಾಸು ವಿವರಗಳಿಗಾಗಿ ಪ್ಯಾನ್ ಕಾರ್ಡ್

08

ಆದಾಯ ಪುರಾವೆ – 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್

09

ಸಾಲ ಅಗತ್ಯತೆ ವಿವರಗಳು

ಸರ್ಕಾರಿ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ

ಸರ್ಕಾರಿ ಉದ್ಯೋಗಿಯು ಓರ್ವ ವೈದ್ಯ, ಬ್ಯಾಂಕ್ ಅಧಿಕಾರಿ ಅಥವಾ ಶಿಕ್ಷಕ ಯಾರಾದರೂ ಆಗಿರಬಹುದು. ತುರ್ತು ನಗದು ಏರ್ಪಾಟು ಮಾಡುವ ಅಗತ್ಯವಿರುವ ಯಾರೇ ಆಗಲಿ ವೈಯಕ್ತಿಕ ಸಾಲ ಅರ್ಜಿ ಸಲ್ಲಿಸಬಹುದು. ಹೀರೋಫಿನ್‌ಕಾರ್ಪ್ ಮೂಲಕ ಸರ್ಕಾರಿ ಉದ್ಯೋಗಿಗಳಿಗಾಗಿ ತ್ವರಿತ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಈ ಕೆಳಗಿನ ಸರಳ ಸಾಲ ಅರ್ಜಿ ಪ್ರಕ್ರಿಯೆಯನ್ನು ಅನುಸರಿಸಿ:

how-to-apply-for-doctor-loan (1).webp

  • 1

    ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪ್ರದೇಶದ ಪಿನ್ ಕೋಡ್ ನಮೂದಿಸಿ

  • 2

    ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಿಸಲಾದ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಅಥವಾ ನಿಮ್ಮ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ ಉಪಯೋಗಿಸಿ

     

  • 3

    ಆಧಾರ್ ಕಾರ್ಡ್ ಸಂಖ್ಯೆ ಅನುಪಸ್ಥಿತಿಯಲ್ಲಿ, ಸ್ಮಾರ್ಟ್ ಕಾರ್ಡ್/ಚಾಲನಾ ಪರವಾನಗಿ/ಗುರುತಿನ ಪುರಾವೆ ಅಥವಾ ವಿಳಾಸ ಪುರಾವೆ ಕಡ್ಡಾಯವಾಗುತ್ತದೆ

     

  • 4

    ಸಾಲ ಅರ್ಜಿ ಫಾರಂ ತುಂಬುವುದಕ್ಕೆ ಮುನ್ನ, ನಿಮ್ಮ ಸಾಲ ಮೊತ್ತ, ಅವಧಿ ಮತ್ತು ಬಡ್ಡಿ ದರವನ್ನು ಅದಕ್ಕನುಗುಣವಾಗಿ ಇಎಂಐಗಳನ್ನು ಯೋಜಿಸುವುದಕ್ಕೆ ನಿಮಗೆ ಅನುವು ಮಾಡಿಕೊಡುವ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸುತ್ತಾ ಕಸ್ಟಮೈಸ್ ಮಾಡಿ

     

  • 5

    ಉದ್ಯೋಗ ಮತ್ತು ಹಣಕಾಸು ವಿವರಗಳನ್ನು ಸಾಲ ಅರ್ಜಿಯಲ್ಲಿ ಸರಿಯಾಗಿ ತುಂಬಿ

     

  • 6

    ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ

     

  • 7

    ಕೆವೈಸಿ ದಾಖಲೆಗಳು ಕಡ್ಡಾಯ

     

  • 8

    ಕೊನೆಯದಾಗಿ, ತತ್ ಕ್ಷಣ ವೈಯಕ್ತಿಕ ಸಾಲದ ಉದ್ದೇಶ ಆಯ್ಕೆ ಮಾಡಿ

ಅಂತಿಮವಾಗಿ, ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲ ಆಪ್ ಉಪಯೋಗಿಸುತ್ತಾ ಸರ್ಕಾರಿ ಉದ್ಯೋಗಿಗಳು, ವಿವಾಹ ಸಾಲ, ಪ್ರಯಾಣ ಸಾಲ, ವೈದ್ಯಕೀಯ ಸಾಲ, ಶಿಕ್ಷಣ ಸಾಲ, ಪಿಂಚಣಿ ,ಸಾಲ, ಟಾಪ್ ಅಪ್ ಸಾಲ ಇತ್ಯಾದಿ ವೈಯಕ್ತಿಕ ಸಾಲಗಳ ವಿಭಿನ್ನ ವಿಧಗಳನ್ನು ಪಡೆದುಕೊಳ್ಳಬಹುದು. ಸಾಲಪಡೆಯುವವರು ಹೀರೋಫಿನ್‌ಕಾರ್ಪ್ ಆಪ್ ನಿಂದ 50,000 ದಿಂದ 1.5 ಲಕ್ಷ ರೂಪಾಯಿವರೆಗೂ ಸಾಲ ಮೊತ್ತವನ್ನು ಪಡೆದುಕೊಳ್ಳಬಹುದು. ಆನ್ ಲೈನ್ ಫಾರ್ಮಾಲಿಟೀಸ್ ಸಲ್ಲಿಕೆಯಾದ ನಂತರ ಹಾಗೂ ಸರಿಯಾಗಿದೆಯೆಂದು ಪರಿಶೀಲನೆಯಾದ ನಂತರ, ಸಾಲಗಾರರ ನೋಂದಾಯಿತ ಬ್ಯಾಂಕ್ ಖಾತೆಯಲ್ಲಿ ಸಾಲ ಮೊತ್ತ ವಿತರಿಸಲ್ಪಡುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೌದು, ಸರ್ಕಾರಿ ಉದ್ಯೋಗಿಯು, ತಮ್ಮ ರೂ. 1.50 ಲಕ್ಷದರೆಗಿನ ತತ್ ಕ್ಷಣ ನಗದು ಅಗತ್ಯಗಳ ಈಡೇರಿಕೆಗಾಗಿ ಗೂಗಲ್ ಸ್ಟೋರ್ ನಿಂದ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾದ ಒಂದು ಸುರಕ್ಷಿತ ವೈಯಕ್ತಿಕ ಸಾಲ ಆಪ್ ಆಗಿರುವ ಹೀರೋಫಿನ್‌ಕಾರ್ಪ್ ನಂತಹ ತತ್ ಕ್ಷಣ ಆನ್ಲೈನ್ ಸಾಲ ಆಪ್ ಗಳ ಮೂಲಕ ವೈಯಕ್ತಿಕ ಸಾಲಗಳನ್ನು ಖಂಡಿತಾ ಪಡೆದುಕೊಳ್ಳಬಹುದು.
ನಿಗದಿ ಪಡಿಸಲಾಗಿರುವ ಅರ್ಹತಾ ಮಾನದಂಡ ಪೂರೈಕೆ ಹಾಗೂ ಸಾಲ ಅನುಮೋದನೆಗಾಗಿ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸುವ ಮೂಲಕ ಸರ್ಕಾರಿ ಉದ್ಯೋಗಿಗಳು ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಸಾಲಗಳೆಡನ್ನೂ ಪಡೆದುಕೊಳ್ಳಬಹುದಾಗಿದೆ. 1.5 ಲಕ್ಷ ರೂಪಾಯಿವರೆಗಿನ ಅಲ್ಪಾವಧಿ ಸಾಲವನ್ನು ತತ್ ಕ್ಷಣ ಸಾಲ ಆಪ್ ಗಳ ಮೂಲಕ ಸುಲಭವಾಗಿ ಮಂಜೂರಾತಿ ಪಡೆದುಕೊಳ್ಳಬಹುದು ಮತ್ತು 5 ಲಕ್ಷದವರೆಗಿನ ದೀರ್ಘಾವಧಿ ಸಾಲಗಳನ್ನು ಮೇಲಾಧಾರ ಒಳಗೊಂಡಿರುವ ಸುರಕ್ಷಿತ ಸಾಲ ಪ್ರಕ್ರಿಯೆಯ ಮೂಲಕ ಪಡೆದುಕೊಳ್ಳಬಹುದು.
ಸರ್ಕಾರಿ ಉದ್ಯೋಗಿಯು, ಖಾಸಗಿ ವಲಯದ ಸಾಲಗಾರರ ರೀತಿಯಲ್ಲಿಯೇ ಸಾಲ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಆದಾಗ್ಯೂ, ಸರ್ಕಾರಿ ಉದ್ಯೋಗಿಗಳಿಗೆ ಕೂಡಾ ಮೂಲ ವೈಯಕ್ತಿಕ ಸಾಲ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆನ್ಲೈನ್ ಸಾಲ ಅರ್ಜಿ ಸಲ್ಲಿಕೆಯು ಗಣನೀಯ ಪ್ರಮಾಣದ ಸಮಯ ಉಳಿತಾಯ ಮಾಡುತ್ತದೆ ಮತ್ತು 24 ಗಂಟೆಗಳೊಳಗಾಗಿ ಮಂಜೂರಾತಿ ದೊರೆಯುತ್ತದೆ.
ಹೀರೋಫಿನ್‌ಕಾರ್ಪ್ ಎನ್ನುವುದು ಒಂದು ಸುರಕ್ಷಿತ ಸಾಲ ಆಪ್ ಆಗಿದೆ ಮತ್ತು ರೂ. 1,50,000 ರೂಪಾಯಿವರೆಗಿನ ನಿಮ್ಮ ತತ್ ಕ್ಷಣ ನಗದು ಅಗತ್ಯಗಳ ಪೂರೈಕೆಗೆ ಸುಲಭವಾಗಿ ಲಭ್ಯವಿದೆ. ಅಲ್ಲದೇ, ಸಾಲ ಅರ್ಜಿ ಪ್ರಕ್ರಿಯೆಯು ಕಾಗದ ರಹಿತ ದಾಖಲೆ ಸಲ್ಲಿಕೆಯೊಂದಿಗೆ ಗೊಂದಲ ಮುಕ್ತವಾಗಿದೆ.
ಆನ್ಲೈನ್ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಕನಿಷ್ಠ ದಾಖಲೆಗಳು ಅಗತ್ಯವಿರುತ್ತದೆ. ಆದಾರ್ ಕಾರ್ಡ್/ಸ್ಮಾರ್ಟ್ ಕಾರ್ಡ್/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್ ನಂತಹ ಇ-ಕೆವೈಸಿ ದಾಖಲೆಗಳು ಕಡ್ಡಾಯ ದಾಖಲೆಗಳಾಗಿರುತ್ತವೆ.
ಸಾಲ ಪಡೆಯುವವರ ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು ಮತ್ತು ಮಾಸಿಕ ಕನಿಷ್ಠ 15000 ಆದಾಯ ಇದ್ದಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.